ರಂಗಸಾಹಿತ್ಯ ಸಾಂಸತಿಕ ಬದುಕಿನ ಅಸ್ಮಿತೆ

0304klb02
Published on

ಕಲಬುರಗಿ: ಒತ್ತಡದ ಜೀವನ ತಲ್ಲಣಗಳಲ್ಲಿ ರಂಗ ಕಲೆ ಮತ್ತು ರಂಗ ಸಾಹಿತ್ಯ ನಮ್ಮ ಸಾಂಸತಿಕ ಬದುಕಿನ ಅಸ್ಮಿತೆಯಾಗಿವೆ ಎಂದು ಸಮ್ಮೇಳನದ ರ‍್ವಾಧ್ಯಕ್ಷರಾದ ಗದ್ದುಗೆ ಮಠ ಮಹಾತ್ಮ ಪೀಠದ ಶ್ರೀ ನಾಗಪ್ಪಯ್ಯ ಮಹಾಸ್ವಾಮೀಜಿ ನುಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್​ ಮೊದಲ ಬಾರಿಗೆ ಕನ್ನಡ ಭವನದ ಬಾಪುಗೌಡ ರ‍್ಶನಾಪುರ ರಂಗಮಂದಿರದಲ್ಲಿ ಲಿಂ. ಕೋಡ್ಲಿ ಕಂಟೆಪ್ಪ ಮಾಸ್ತರ್​ ವೇದಿಕೆಯಡಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಪ್ರಥಮ ರಂಗ ಸಾಹಿತ್ಯ ಸಮ್ಮೇಳನದಲ್ಲಿ ರ‍್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜೀವನ ಯಾಂತ್ರಿಕವಾಗಿದ್ದರಿಂದ ರಂಗಭೂಮಿ ಕಲೆ ಮತ್ತು ಪರಂಪರೆ ಮರೀಚಿಕೆಯಾಗುತ್ತಿವೆ. ರಂಗ ಕಲೆಗಳು ನಶಿಸುತ್ತಿವೆ. ಬಣ್ಣದ ಬದುಕಿನ ಧ್ವನಿಗಳು ಣಿಸುತ್ತಿವೆ. ಮೊಬೈಲ್​ ಸಂಸತಿಯಿಂದ ನಾಟಕ ೇತ್ರ ಬದಲಾಗಿದೆ. ಇಂದು ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗಳ ಬಣ್ಣದ ಬದುಕು ದೂರವಾಗಿ ಜೀವನ ಸತ್ಯ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ರಂಗಸಾಹಿತ್ಯ ಸಾಮಾಜಿಕ ಜಾಗೃತಿ ಮೂಡಿಸುವ ಶಕ್ತಿ ಇದ್ದು, ಬದುಕು ಕಟ್ಟಿಕೊಡುತ್ತದೆ. ಆದರೆ ರಂಗ ಕಲೆಗಳು ಸವಾಲುಗಳ ಮಧ್ಯೆ ಸಮಾಜದಲ್ಲಿ ಜೀವಂತಿಕೆ ಪಡೆದುಕೊಂಡಿವೆ. ರಂಗ ಕಲಾವಿದರ ಬದುಕು ರ‍್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಕಲೆ, ಸಾಹಿತ್ಯ ಮತ್ತು ಸಂಗೀತ ೇತ್ರಗಳು ಸಾಮಾಜಿಕ ಜೀವನ ಮಟ್ಟ ಎತ್ತರಿಸುತ್ತದೆ ಎಂದರು.

ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ರಂಗರ‍್ಮಿಗಳು ಅಭಿನಯಿಸುವ ನಾಟಕಗಳು ಪ್ರೇಕ್ಷಕರನ್ನು ಹಿಡಿದಿಡುವುದರ ಜತೆಗೆ ಸಮಾಜಕ್ಕೆ ಪರಿರ‍್ತನೆ ಸಂದೇಶ ರವಾನಿಸುತ್ತವೆ. ಹೊಸ ಪೀಳಿಗೆಯಲ್ಲಿ ನಾಟಕ ರಚನೆ ಮತ್ತು ಅಭಿರುಚಿ ಬೆಳೆಸುವ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಸಾಪ ಯಾದಗಿರಿ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಸಮ್ಮೇಳನ ಉದ್ಘಾಟಿಸಿದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ರಾಜುಗೌಡ ನಾಗನಹಳ್ಳಿ, ಅಧ್ಯಕ್ಷ ಗಿರಿರಾಜ ಯಳಮೇಲಿ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನರ‍್ದೇಶಕ ದತ್ತಪ್ಪ ಸಾಗನೂರ, ಪ್ರಾಧ್ಯಾಪಕಿ ಡಾ.ಮೈತ್ರಾದೇವಿ ಹಳೆಮನಿ, ಯುವ ಮುಖಂಡ ರಾಮಚಂದ್ರ ರೆಡ್ಡಿ ಗುಮ್ಮಟ ಮಾತನಾಡಿದರು.

ಕಸಾಪದ ಶಿವರಾಜ ಅಂಡಗಿ, ರ‍್ಮಣ್ಣ ಧನ್ನಿ, ಶರಣರಾಜ ಛಪ್ಪರಬಂದಿ, ಸಿದ್ಧಲಿಂಗ ಬಾಳಿ, ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ರ‍್ಮರಾಜ ಜವಳಿ, ಶಕುಂತಲಾ ಪಾಟೀಲ, ಜ್ಯೋತಿ ಕೋಟನೂರ, ದೇವೇಂದ್ರ ದೇಸಾಯಿ ಕಲ್ಲೂರ, ಬಾಬುರಾವ ಪಾಟೀಲ, ಕಲ್ಯಾಣಕುಮಾರ ಶೀಲವಂತ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net