ರಂಗಸಂತ ಎಲ್​ಬಿಕೆ ಆಲ್ದಾಳ ಟ್ರಸ್ಟ್​ ಅಸ್ತಿತ್ವಕ್ಕೆ

Oplus_0
Oplus_0
Published on

ಕಲಬುರಗಿ: ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸತ ನಾಟಕಕಾರ ಎಲ್​.ಬಿ.ಕೆ.ಆಲ್ದಾಳ ಕವಿಗಳ ಟ್ರಸ್ಟ್​, ಹಿರಿಯ ರಂಗ ಕಲಾವಿದ ಸೇಡಂನ ಶಿವಯ್ಯಸ್ವಾಮಿ ಬಿಬ್ಬಳ್ಳಿ ಅಧ್ಯಕ್ಷತೆಯಲ್ಲಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ರ‍್ನಾಟಕ ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಹಾಗೂ ಟ್ರಸ್ಟ್​ ಉಪಾಧ್ಯಕ್ಷ ಎಲ್​.ಬಿ.ಶೇಕ್​ ಮಾಸ್ಟರ್​ ತಿಳಿಸಿದರು.

ನಗರದ ರಂಗಾಯಣದ ಸಭಾಂಗಣದಲ್ಲಿ ಸೋಮವಾರ ರ‍್ಪಡಿಸಿದ್ದ ಸಭೆಯಲ್ಲಿ ಪ್ರಾಸ್ತಾವಿಕ ಮಾತನಾಡಿ, ಟ್ರಸ್ಟ್​ ಧ್ಯೇಯೋದ್ದೇಶಗಳನ್ನು ವಿವರಿಸಿದರು.

ಆಲ್ದಾಳ ಕವಿಗಳ ಹೆಸರಿನಲ್ಲಿ ಟ್ರಸ್ಟ್​ ರಚಿಸುವ ಮೂಲಕ ಎಲ್​.ಬಿ.ಕೆ.ಆಲ್ದಾಳ ಅವರು ರಂಗಭೂಮಿಗೆ ನೀಡಿದ ಕೊಡುಗೆ ಸ್ಮರಣೀಯವಾಗಿಸುವಂತಹ ಕರ‍್ಯಕ್ರಮ ರೂಪಿಸುವುದು, ಆಲ್ದಾಳ ರಚಿಸಿದ ಸಮಗ್ರ ನಾಟಕಗಳ ಸಂಪುಟ ಹೊರತರುವುದು, ಆಲ್ದಾಳ ಸ್ಮರಣರ‍್ಥ ಗ್ರಾಮೀಣ ರಂಗಭೂಮಿಯ ಸಾಧಕರಿಗೆ ಪ್ರಶಸ್ತಿ ನೀಡುವುದು. ವೃತ್ತಿ ರಂಗಭೂಮಿ ಶೈಲಿಯ ಗ್ರಾಮೀಣ ನಾಟಕಗಳ ಕುರಿತು ವಿಚಾರ ಸಂಕಿರಣ ನಡೆಸುವುದು ಸೇರಿ ವಿವಿಧ ಚಟುವಟಿಕೆ ಉದ್ದೇಶದಿಂದ ಟ್ರಸ್ಟ್​ ರಚಿಸಲಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಟ್ರಸ್ಟ್​ ಅಧ್ಯಕ್ಷ ಶಿವಯ್ಯಸ್ವಾಮಿ ಬಿಬ್ಬಳ್ಳಿ ಮಾತನಾಡಿ, ಮುಂಬರುವ ದಿನಗಳಲ್ಲಿ ಟ್ರಸ್ಟ್​ ಉದ್ಘಾಟನೆ, ಆಲ್ದಾಳ ರಚಿಸಿದ ನಾಟಕದ ಬಿಡುಗಡೆ, ಆಲ್ದಾಳ ರಚಿಸಿದ ನಾಟಕದ ಪ್ರರ‍್ಶನ ಸೇರಿ ವಿವಿಧ ಕರ‍್ಯಕ್ರಮಗಳನ್ನು ಶೀಘ್ರ ಮಾಡಲಾಗುವುದು ಎಂದರು.

ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಬಸವರಾಜ ಹೂಗಾರ ಮಾತನಾಡಿ, ಕಲ್ಯಾಣ ರ‍್ನಾಟಕ ಭಾಗದಲ್ಲಿ ರಂಗಭೂಮಿಗೆ ಸಂಬಂಧಿಸಿದಂತೆ ಶ್ರಮಿಸಿದ ರಂಗ ಸಾಧಕರ ಗೌರವರ‍್ಥ ಟ್ರಸ್ಟ್​ ಅಥವಾ ಪ್ರತಿಷ್ಠಾನ ಇರಲಿಲ್ಲ. ಮೊದಲ ಬಾರಿಗೆ ಟ್ರಸ್ಟ್​ ಅಸ್ತಿತ್ವಕ್ಕೆ ತಂದಿದ್ದು ಒಳ್ಳೆಯ ಬೆಳವಣಿಗೆ. ಕ್ರಮೇಣ ರ‍್ಕಾರದಿಂದಲೇ ಟ್ರಸ್ಟ್​ ರಚಿಸಲು ಮನವಿ ನೀಡಿದರೆ, ರ‍್ಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ಹೇಳಿ, ಟ್ರಸ್ಟ್​ ಪದಾಧಿಕಾರಿಗಳಿಗೆ ಸನ್ಮಾನಿಸಿದರು.

ಟ್ರಸ್ಟ್​ ಪ್ರಧಾನ ಕರ‍್ಯರ‍್ಶಿ ಶಂಕರ ಜಿ. ಹಿಪ್ಪರಗಿ ಸ್ವಾಗತಿಸಿದರು. ಕೋಶಾಧ್ಯಕ್ಷ ಸರ‍್ಯಕಾಂತ ಹಂಗನಳ್ಳಿ, ಸಹಕರ‍್ಯರ‍್ಶಿ ಬಿ.ಎಚ್​.ನಿರಗುಡಿ, ಕರ‍್ಯಕಾರಿ ಸಮಿತಿ ಸದಸ್ಯರಾದ ಡಾ.ಸುಜಾತಾ ಜಂಗಮಶೆಟ್ಟಿ, ಜೇರ‍್ಗಿ ರಾಜಣ್ಣ, ಶ್ರೀಧರ ಹೆಗಡೆ, ಸೋಮಶೇಖರ ಪಾಟೀಲ್​, ಚಂದ್ರಶೇಖರ ರ‍್ಜಗಿ, ಪ್ರಭಾಕರ ಜೋಶಿ, ರವಿ ಹಿರೇಮಠ, ಶರೀಫ್​ ಆಲ್ದಾಳ, ಶಿವರಾಜ ಪಾಟೀಲ್​ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net