ರಂಗಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ

Application-1-1280x720
Published on


ಚಿತ್ರದುರ್ಗ:ಮೈಸೂರು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆ ಪಡೆದಿರುವ ಮೈಸೂರು ರಂಗಾಯಣದಲ್ಲಿ 10 ತಿಂಗಳ ಅವಧಿಯ ರಂಗಶಿಕ್ಷಣದ ಡಿಪ್ಲೊಮಾ ಕೋರ್ಸ್‌ಗೆ ಪ್ರವೇಶ ಪಡೆಯಲು ಆಸಕ್ತರಿಂದ ಜೂ.20ರೊಳಗೆ ಅರ್ಜಿ ಆಹ್ವಾನಿಸಲಾಗಿದೆ. ಕೋರ್ಸ್‌ಗೆ ಸೇರಬಯಸುವವರಿಗೆ ರಂಗಭೂಮಿಯ ಪ್ರಾಥಮಿಕ ಅನುಭವ,ಸೆಕೆಂಡ್‌ಪಿಯುಸಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆಯಾಗಿರಬೇಕು. ಆಯ್ಕೆಯಾದವರಿಗೆ ವಸತಿ,ಮಾಸಿಕ 5 ಸಾವಿರ ರೂ.ವಿದ್ಯಾರ್ಥಿ ವೇತನವಿರುತ್ತದೆ. ಆಸಕ್ತರು  http:// rangayanamysore. karnataka.gov.in ಮೂಲಕ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿಯಲ್ಲಿ ಖುದ್ದು ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದವರಿಗೆ ಸಂದರ್ಶನ ದಿನಾಂಕವನ್ನು ನಂತರ ತಿಳಿಸ ಲಾಗುವುದು. 15-20ರಿಂದ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗೆ 0821-2512639/9148827720ನ್ನು ಸಂಪರ್ಕಿಸಬಹುದೆಂದು ರಂಗಾಯಣದ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net