ರಂಗಭೂಮಿಯಲ್ಲಿದೆ ಜೀವ ಕಲೆ

20 12
Published on

ಕುಣಿಗಲ್​ನಲ್ಲಿ ಪೌರಾಣಿಕ ಹಗಲು ನಾಟಕೋತ್ಸವಕ್ಕೆ ಚಾಲನೆ

ಕುಣಿಗಲ್​: ನಾಟಕ, ರಂಗಭೂಮಿಯಲ್ಲಿಯೇ ನಿಜವಾದ ಜೀವಂತ ಕಲೆ ಅಡಗಿದ್ದು, ಅದನ್ನು ಉಳಿಸಿ ಬೆಳೆಸುವ ಕೆಲಸ ಎಲ್ಲೆಡೆ ನಡೆಯಬೇಕಿದೆ ಎಂದು ಕಲಾವಿದರ ೇಮಾಭಿವದ್ಧಿ ಸಂದ ರಾಜಾಧ್ಯ ಮಾಯಣ್ಣಗೌಡ ತಿಳಿಸಿದರು.

ಪಟ್ಟಣದ ಖಾಸಗಿ ಬಸ್​ ನಿಲ್ದಾಣದಲ್ಲಿ ತಾಲೂಕು ಕಲಾವಿದರ ೇಮಾಭಿವದ್ಧಿ ಸಂದ 18ನೇ ವಾರ್ಷಿಕೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಹಗಲು ಪೌರಾಣಿಕ ನಾಟಕೋತ್ಸವವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಚಲನಚಿತ್ರದಲ್ಲಿ ದಶ್ಯ ಮತ್ತು ನಟನೆಯಲ್ಲಿ ಏನಾದರೂ ಲೋಪದೋಷ ವಾದಲ್ಲಿ ಅದನ್ನು ಸರಿಪಡಿಸಿಕೊಳ್ಳುವ ಅವಕಾಶ ಇರುತ್ತದೆ. ಆದರೆ ರಂಗಭೂಮಿ ಪ್ರದರ್ಶನದಲ್ಲಿ ತಿದ್ದುಪಡಿಗೆ ಮತ್ತು ತಿರುಚಲು ಯಾವುದೇ ಅವಕಾಶವಿರುವುದಿಲ್ಲ, ರಂಗಭೂಮಿಯಲ್ಲಿ ನಟನೆ ಮಾಡುವುದು ಒಂದು ಸವಾಲಿನ ಕೆಲಸವಾಗಿದೆ. ಕಲೆಯನ್ನು ಕರಗತ ಮಾಡಿಕೊಂಡಲ್ಲಿ ಉತ್ತಮ ಪ್ರದರ್ಶನ ನೀಡಬಹುದ್ದಾಗಿದೆ ಎಂದರು.

ಈ ಬಾರಿ ಪೊಲೀಸ್​ ಸಿಬ್ಬಂದಿ ನಾಟಕ ಪ್ರದರ್ಶನಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ತಮ್ಮ ಜೀವನದ ಜಂಜಾಟದಿಂದ ಹೊರ ಬರಲು ನಾಟಕ ಅಭಿನಯವು ಉತ್ತಮ ಅವಕಾಶ ಕಲ್ಪಿಸುತ್ತಿದೆ ಎಂದರು.

ತಾಲೂಕಿನಲ್ಲಿ ಹತ್ತಾರು ಮಂದಿ ಉತ್ತಮ ಕಲಾವಿದರಿದ್ದಾರೆ ಹಾಗೂ ನವ ಕಲಾವಿದರು ಇರುವರು ಅವರಿಗೆ ತರಬೇತಿ ನೀಡಲು ಮತ್ತು ಸಂದ ಚಟುವಟಿಕೆಗಳಿಗಾಗಿ ಕಲಾಭವನ ಅವಶ್ಯಕವಿರುತ್ತದೆ. ಈ ಬಗ್ಗೆ ಶಾಸಕ ಡಾ.ಎಚ್​.ಡಿ.ರಂಗನಾಥ್​ ಅವರಿಗೆ ಮನವಿ ಸಲ್ಲಿಸಿ ನಿವೇಶನ ಮಂಜೂರು ಮಾಡಿಸಿ ಸರ್ಕಾರದ ಅನುದಾನ ಮತ್ತು ದಾನಿಗಳಿಂದ ದೇಣಿಗೆ ಪಡೆದು ಕಲಾಭವನ ನಿರ್ಮಿಸುವಂತೆ ಸಂದ ಕಲಾವಿದರಿಗೆ ತಿಳಿಸಿದರು.

ಬೆಸ್ಕಾಂ ಇಇ ಪುರುಷೋತ್ತಮ್​ ಮಾತನಾಡಿ, ರಂಗಭೂಮಿಯು ಮಾನವನಲ್ಲಿ ಭಾವನಾತ್ಮಕ ಸಂಬಂಧ ಗಟ್ಟಿಗೊಳಿಸುವಲ್ಲಿ ಮತ್ತು ಮಾನವೀಯತೆ ಬೆಳೆಸುವಲ್ಲಿ ಸಹಕಾರಿಯಾಗಿದೆ. ರಂಗಭೂಮಿ ಕಲೆಯನ್ನು ಕಲಾವಿದರು ಹಾಗೂ ಕಲಾಸಕ್ತರು ಪ್ರೋತ್ಸಾಹಿಸುವ ಮೂಲಕ ಉಳಿಸಿ ಬೆಳೆಸಬೇಕು ಎಂದರು.

ತಾಲೂಕು ಕಲಾವಿಧ ೇಮಾಭಿವದ್ಧಿ ಸಂದ ಅಧ್ಯ ಸಿದ್ದರಾಮೇಗೌಡ ಮಾತನಾಡಿ, ಅಳಿವಿನ ಹಂಚಿನಲ್ಲಿ ಇರುವ ರಂಗಭೂಮಿ ಕಲೆ ಉಳಿಸುವ ನಿಟ್ಟಿನಲ್ಲಿ ನಮ್ಮ ಸಂವು ಹತ್ತಾರು ಕಲಾವಿದರಿಗೆ ತರಬೇತಿ ನೀಡಿ 18 ವರ್ಷಗಳಿಂದ ನೂರಾರು ಪೌರಾಣಿಕ ನಾಟಕಗಳನ್ನು ಪ್ರದರ್ಶನ ನೀಡಿದೆ. ರಂಗಭೂಮಿಯಲ್ಲಿ ಅತ್ಯುತ್ತಮ ಸಾಧನೆಗೈದ ಕಲಾವಿದರನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಅವರನ್ನು ಗೌರವಿಸಲಾಗಿದೆ. ಈ ಭಾರಿ ಕುರುೇತ್ರ, ಸತ್ಯ ಹರಿಶ್ಚಂದ್ರ, ಸತ್ಯವ್ರತ, ಸಂಪೂರ್ಣ ರಾಮಾಯಣ ಸೇರಿ 13 ನಾಟಕಗಳನ್ನು 13 ದಿನಗಳ ಕಾಲ ಹಗಲಿನಲ್ಲಿ ಅನುಭವಿ ಕಲಾವಿದರಿಂದ ನಾಟಕ ಪ್ರದರ್ಶನ ಮಾಡಲಾಗುತ್ತಿದೆ ಎಂದು ಹೇಳಿದರು. ಖಜಾಂಚಿ ತಿಮ್ಮಪ್ಪ, ಕಲಾವಿದ ಕೆ.ಎ.ರವೀಂದ್ರಕುಮಾರ್​, ಮುಖಂಡರಾದ ಐ.ಕೆ.ಸಿದ್ದಗಂಗಯ್ಯ, ಎಸ್​.ಎಲ್​.ವಿ ಮಹೇಶ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net