

ಇಟಗಿ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ಮತ್ತು ಆಧ್ಯಾತ್ಮಿಕ ಆದರ್ಶ ತಿಳಿಸುವ ಪ್ರಭಾವಿ ಮಾಧ್ಯಮ ರಂಗಭೂಮಿ ಎಂದು ಧಾರವಾಡ ರಂಗಾಯಣ ನಿರ್ದೇಶಕ ಡಾ. ರಾಜು ತಾಳಿಕೋಟಿ ಹೇಳಿದರು.
ಸಮೀಪದ ಚಿಕ್ಕ ಮುನವಳ್ಳಿ ಆರೂಢ ಮಠದಲ್ಲಿ 45ನೇ ಅಖಿಲ ಕರ್ನಾಟಕ ವೇದಾಂತ ಪರಿಷತ್ ನಿಮಿತ್ತ ಪ್ರತಿವರ್ಷ ಕೊಡಮಾಡುವ ಆರೂಢಶ್ರೀ ಪ್ರಶಸ್ತಿಯನ್ನು ಈಚೆಗೆ ಸ್ವೀಕರಿಸಿ ಮಾತನಾಡಿದರು. ಅಧ್ಯಾತ್ಮಕ್ಕೂ ಮತ್ತು ರಂಗಭೂಮಿಗೂ ಅವಿನಾಭಾವ ಸಂಬಂಧವಿದ್ದು, ಮಹಾತ್ಮರ ಚರಿತ್ರೆ ಜನಸಾಮನ್ಯರ ಹದಯಕ್ಕೆ ಮುಟ್ಟಿಸಿದ ಕೀರ್ತಿ ರಂಗಭೂಮಿಗಿದೆ. ಮಠದ ಪೂಜ್ಯರು ರಂಗಭೂಮಿ ಆರೂಢ ಶ್ರೀ ಪ್ರಶಸ್ತಿ ನೀಡಿದ್ದು ರಂಗಭೂಮಿಗೆ ಸಂದ ಗೌರವವಾಗಿದೆ ಎಂದರು.
ಪೀಠಾಧ್ಯಕ್ಷ ಶಿವಪುತ್ರ ಸ್ವಾಮೀಜಿ, ವೀರೇಶ್ವರ ಸ್ವಾಮೀಜಿ ,ರಮೇಶ ಪಾತ್ರೋಟ ಗುರುಸ್ವಾಮಿಗಳು, ಆಧ್ಯಾತ್ಮಿಕ ಚಿಂತಕ ಸುರೇಶ ಹುಣಸಿಕಟ್ಟಿ, ನಿಂಗಪ್ಪ ಜಾಧವ, ಮಡಿವಾಳಪ್ಪ ತೋರೋಜಿ, ಕೀರಪ್ಪ ಹಣಗೋಜಿ, ಶಿವಾಜಿ ಬನೋಶಿ, ಶಿವಾಜಿ ಸನದಿ, ಈರಣ್ಣ ಕಾದ್ರೊಳ್ಳಿ, ವಿಠ್ಠಲ ಪದ್ಮಪ್ಪನವರ ಇತರರು ಇದ್ದರು.