ರಂಗನಾಥಸ್ವಾಮಿ ದೇವಾಲಯ ಪಾಕಶಾಲೆಯಲ್ಲಿ ಅಗ್ನಿ ಅವಘಡ

Screenshot_20230831_220159_Gallery
Published on

ಶ್ರೀರಂಗಪಟ್ಟಣ: ವಿಶ್ವ ಪ್ರಸಿದ್ಧ ಶ್ರೀ ರಂಗನಾಥಸ್ವಾಮಿ ದೇವಾಲಯ ಒಳಭಾಗದ ಪಾಕಶಾಲೆಯಲ್ಲಿ ಅಗ್ನಿ ಅವಘಡ ಸಂಭವಸಿದ್ದು, ತಕ್ಷಣವೇ ಎಚ್ಚೆತ್ತು ಬೆಂಕಿ ನಂದಿಸಿದ್ದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.


ಪಟ್ಟಣದ ಐತಿಹಾಸಿಕ ಶ್ರೀ ಆದಿರಂಗ ದೇಗುಲದ ಆವರಣದಲ್ಲಿರುವ ಪಾಕಶಾಲೆಯಲ್ಲಿ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಲಾಡು ತಯಾರಿಸುವ ವೇಳೆ ಬಾಣಲೆಯಲ್ಲಿದ್ದ ಎಣ್ಣೆ ಸಿಡಿದಿದೆ. ಇದರಿಂದ ಬೆಂಕಿ ಹೊತ್ತಿಕೊಂಡು ಪಕ್ಕದಲ್ಲಿ ಇರಿಸಿದ್ದ ಅಡುಗೆ ಎಣ್ಣೆಪ್ಯಾಕೆಟ್‌ಗೂ ತಗುಲಿದ್ದರಿಂದ ಬೆಂಕಿ ಧಗಧಗನೆ ಉರಿದು ಕೋಣೆ ತುಂಬ ವ್ಯಾಪಿಸಿದೆ. ತಕ್ಷಣ ಸಮಯಪ್ರಜ್ಞೆ ಮೆರೆದ ಬಾಣಸಿಗ, ಪಾಕಶಾಲೆಯೊಳಗಿದ್ದ 6 ಸಿಲಿಂಡರ್‌ಗಳನ್ನು ಹೊರಗಿಟ್ಟು ಸಹಾಯಕ್ಕೆ ಕೂಗಿಕೊಂಡಿದ್ದಾನೆ.


ವಿಷಯ ತಿಳಿದು ಹೊರಗಿದ್ದ ಸಾರ್ವಜನಿಕರು ಮಾಹಿತಿ ನೀಡಿದ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net