ರಂಗನಾಥಗೆ ಸಾಹಿತ್ಯ ಸೌರಭ ಪ್ರಶಸ್ತಿ

14 Dwd 4 Ranganath Walmiki
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿಕ್ಷಕ- ಲೇಖಕ ರಂಗನಾಥ ಎನ್. ವಾಲ್ಮೀಕಿ ಅವರಿಗೆ ರಾಜ್ಯ ಬರಹಗಾರರ ಸಂಘ ಕೊಡಮಾಡುವ ರಾಷ್ಟ್ರಮಟ್ಟದ ಸಾಹಿತ್ಯ ಸೌರಭ ಪ್ರಶಸ್ತಿ ದೊರೆತಿದೆ. ತಾಲೂಕಿನ ಮನಗುಂಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಹ ಶಿಕ್ಷಕರಾಗಿರುವ ಇವರು, ರಾಜ್ಯಮಟ್ಟದ ಸಂಪನ್ಮೂಲ ಶಿಕ್ಷಕರಾಗಿದ್ದಾರೆ. ಮರುಸಿಂಚನ , ಸಿಸಿಇ , ಕಲಿಕಾ ಚೇತರಿಕೆ , ಕನ್ನಡ ಕುಸುಮ, ಸಾಮಾನ್ಯ ತರಬೇತಿ ಕಾರ್ಯಕ್ರಮಗಳಲ್ಲಿ ಶಿಕ್ಷಕರು ಹಾಗೂ ಮಕ್ಕಳಿಗೆ ತರಬೇತಿ ನೀಡಿದ್ದಾರೆ. ವಿವಿದ ಪತ್ರಿಕೆಗಳಲ್ಲಿ ಅನೇಕ ಶೈಕ್ಷಣಿಕ ಲೇಖನಗಳನ್ನು ಬರೆದಿದ್ದಾರೆ. ಸದೃಢ ಮನಸ್ಸು ಸಾಧನೆಗೆ ಮೆಟ್ಟಿಲು, ಅರಿವಿನ ಕನ್ನಡಿ, ದೃಷ್ಟಿ ಬದಲಿಸಿದರೆ ದೃಶ್ಯವೂ ಬದಲಾದೀತು, ರಂಗಾ0ತರ0ಗ, ಗುರುಪಥ, ಉಳಿದಾವ ನಮ್ಮ ಹಾಡು, ಕೇಸರಿ ಪಥ, ಕಂಡಷ್ಟು ತಿಳಿದಷ್ಟು, ಜೀವನಾಮೃತ ಕೃತಿಗಳನ್ನು ರಚಿಸಿದ್ದಾರೆ. ಮಾ. 16ರಂದು ಶಿವಮೊಗ್ಗದಲ್ಲಿ ಆಯೋಜಿಸಿದ ಕನ್ನಡ ನುಡಿ ವೈಭವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಾಜ್ಯ ಬರಹಗಾರರ ಬಳಗ ಹೂವಿನಹಡಗಲಿ ಸಂಸ್ಥಾಪಕ ಅಧ್ಯಕ್ಷ ಮಧು ನಾಯ್ಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net