ರಂಗನಾಥ ಸ್ವಾಮಿ ದೇಗುಲದಲ್ಲಿ ಸ್ವಚ್ಛತಾ ಕಾರ್ಯ

24sor1
ಸೊರಬದಲ್ಲಿ ಯುವ ಬ್ರಿಗೇಡ್‌ನಿಂದ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಆವರಣ ಮತ್ತು ಗೋಪುರದ ಸ್ವಚ್ಛತಾ ಕಾರ್ಯ ನೆರವೇರಿಸಲಾಯಿತು.
Published on

ಸೊರಬ: ಪಟ್ಟಣದ ಪುರದೈವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಆವರಣ ಮತ್ತು ಗೋಪುರವನ್ನು ಯುವ ಬ್ರಿಗೇಡ್‌ನಿಂದ ಭಾನುವಾರ ಸ್ವಚ್ಛಗೊಳಿಸಲಾಯಿತು.

ದೇವಸ್ಥಾನದ ಆವರಣ ಮತ್ತು ಹಾಸುಗಲ್ಲುಗಳ ಮೇಲೆ ಹುಲ್ಲು ಮತ್ತು ಪಾಚಿ ಬೆಳೆದಿತ್ತು. ಗೋಪುರದ ಮೇಲೂ ಗಿಡಗಳು ಬೆಳೆದಿದ್ದವು. ಇದನ್ನು ಗಮನಿಸಿದ ಯುವ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಛತಾ ಕಾರ್ಯ ನಡೆಸುವ ಜತೆಗೆ ದೇವಸ್ಥಾನ ಸೋರದಂತೆ ಟಾರ್ಪಲ್ ಹೊದಿಸಿದರು.

ಈ ವೇಳೆ ಮಾತನಾಡಿದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ ಮಾತನಾಡಿ, ಪುರಸಭೆ ವ್ಯಾಪ್ತಿಯ ಹಲವು ದೇವಸ್ಥಾನಗಳನ್ನು ಸ್ವಚ್ಛಗೊಳಿಸಲಾಗಿದೆ. ಸಂಘಟನೆ ಕಾರ್ಯಕರ್ತರು ರಂಗನಾಥ ದೇವಸ್ಥಾನ ಆವರಣದಲ್ಲಿ ಗಿಡ ಬೆಳೆದಿರುವ ಕುರಿತು ಗಮನಕ್ಕೆ ತಂದಿದ್ದರು. ಈ ನಿಟ್ಟಿನಲ್ಲಿ ದೇವಸ್ಥಾನ ಆವರಣವನ್ನು ಮೊದಲ ಹಂತದಲ್ಲಿ ಸ್ವಚ್ಛಗೊಳಿಸಲಾಗಿದೆ. ಸ್ವಚ್ಛತಾ ಕಾರ್ಯ ಮುಂದುವರಿಯಲಿದೆ ಎಂದು ತಿಳಿಸಿದರು.

ಯುವ ಬ್ರಿಗೇಡ್ ತಾಲೂಕು ಸಂಚಾಲಕ ರಂಗನಾಥ ಮೊಗವೀರ್, ಲೋಕೇಶ್, ವಿನೋದ್ ವಾಲ್ಮೀಕಿ, ಅಭಿ ಹೊಯ್ಸಳ, ಅನಿಲ್, ದತ್ತ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net