ರಂಗಕಲೆ ಉಳಿವಿಗೆ ಎಲ್ಲರೂ ಶ್ರಮಿಸಲಿ

10
Published on

ತಲ್ಲೂರ: ಗ್ರಾಮೀಣ ಭಾಗದಲ್ಲಿ ನಾಟಕಗಳು ಪ್ರದರ್ಶನಗೊಳ್ಳುತ್ತಿರುವುದರಿಂದ ರಂಗಕಲೆ ಜೀವಂತವಾಗಿದೆ ಎಂದು ಕಾಂಗ್ರೆಸ್​ ಮುಖಂಡ ಅಶ್ವತ್ಥ ವೆದ್ಯ ಹೇಳಿದರು. ಸಮೀಪದ ಜಾಲಿಕಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಬಸವೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ರಕ್ತ ಹರಿಸಿದ ರೆತನ ಹುಲಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ದಶ್ಯ ಮಾಧಮಗಳ ಹಾವಳಿಯಿಂದ ರಂಗಭೂಮಿ ಕಲೆಗೆ ಧಕ್ಕೆ ಬರುತ್ತಿದೆ. ರಂಗಭೂಮಿ ಕಲೆ ಉಳಿಯಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ಗುತ್ತಿಗೋಳಿ ಹೊಸಕೊಟಿ ಅಭಿನವ ರೇವಯ್ಯ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಆಚರಣೆಗಳು ಮನುಷ್ಯನ ಅವಿಭಾಜ್ಯ ಅಂಗಗಳಾಗಿವೆ. ಶರಣರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು. ವೇದಮೂರ್ತಿ ಸಂಗಯ್ಯ ಹಿರೇಮಠ, ಯರಗಟ್ಟಿ ಎಪಿಎಂಸಿ ಅಧ್ಯ ನೀಲಕಂಠ ಸಿದ್ದಬಸನವರ, ಜಿಪಂ ಮಾಜಿ ಸದಸ್ಯ ಕೀರಪ್ಪ ಹದ್ದನ್ನವರ, ವೆ.ಎ್​.ನಾಯ್ಕರ, ಈರಯ್ಯ ಗೌಡರ, ಬಸವರಾಜ ಕಡಬಿ, ಮಹಾದೇವಯ್ಯ ಪೂಜೇರ, ಶಂಕ್ರೆಪ್ಪ ಹುಬ್ಬಳ್ಳಿ, ಮುತ್ತನಗೌಡ ನಾಯ್ಕರ, ವೆಂಕಪ್ಪ ಯರಡ್ಡಿ, ಕಲ್ಮೇಶ ಬಾಲರಡ್ಡಿ, ಮಹಾಂತೇಶ ಉಪ್ಪಿನ, ಎಂ.ಬಿ.ಯಡಳ್ಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net