ರಂಗ ಶಿಬಿರಗಳಿಂದ ಮಕ್ಕಳ ಮನೋಬಲ ವೃದ್ಧಿ

7 ckm 1
ಚಿಕ್ಕಮಗಳೂರು ಕುವೆಂಪು ಕಲಾಮಂದಿರದಲ್ಲಿ ಜೆವಿಎಸ್ ಶಾಲೆ ಆಯೋಜನೆಯಲ್ಲಿ ನಗರದ ರಂಗ ನಿರ್ದೇಶಕ ವಿನೀತ್ ಕುಮಾರ್ ನೇತೃತ್ವದಲ್ಲಿ ಕಳೆದ ೨೦ ದಿನಗಳಿಂದ ಜರುಗಿದ ಜರುಗಿದ ಜೋಕಾಲಿ ಬೇಸಿಗೆ ರಂಗ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರದಲ್ಲಿ ಭಗವಹಿಸಿದ್ದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
Published on

ಚಿಕ್ಕಮಗಳೂರು: ರಂಗ ಶಿಬಿರಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಪಡೆದ ಶಿಕ್ಷಣದಿಂದ ಮಕ್ಕಳು ತಮ್ಮ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್ ತಿಳಿಸಿದರು.

ನಗರದ ಕುವೆಂಪು ಕಲಾಮಂದಿರದಲ್ಲಿ ಜೆವಿಎಸ್ ಶಾಲೆ ಆಯೋಜನೆಯಲ್ಲಿ ನಗರದ ರಂಗ ನಿರ್ದೇಶಕ ವಿನೀತ್ ಕುಮಾರ್ ನೇತೃತ್ವದಲ್ಲಿ ಕಳೆದ ೨೦ ದಿನಗಳಿಂದ ಜರುಗಿದ ಜರುಗಿದ ಜೋಕಾಲಿ ಬೇಸಿಗೆ ರಂಗ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ಮಕ್ಕಳಿಗೆ ದೊರೆಯಬೇಕಾದ ಅಜ್ಜಿ ಅಜ್ಜ ಸೇರಿದಂತೆ ರಕ್ತ ಸಂಬAಧಗಳ ಬಾಂಧವ್ಯ ದೊರೆಯದಂತಾಗಿದೆ. ಮಕ್ಕಳು ಟಿವಿ, ಮೊಬೈಲ್ ಗೀಳಿಗೆ ಬೀಳುವ ಆತಂಕದ ಈ ದಿನಗಳಲ್ಲಿ ಇಂತಹ ಶಿಬಿರಗಳು ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರತರಲು ಸಹಕಾರಿ ಎಂದರು.

ಈ ಶಿಬಿರವು ನಿರ್ದೇಶಕ ವಿನೀತ್ ಕುಮಾರ್ ಹಾಗೂ ಅವರ ತಂಡದ ಉತ್ತಮಕಾರ್ಯ ನಿರ್ವಹಣೆಯಿಂದ ಯಶಸ್ವಿಯಾಗಿ ನಡೆದಿದೆ. ಮುಂದಿನ ವರ್ಷದಿಂದ ನಮ್ಮ ಜೆವಿಎಸ್ ಶಾಲೆಯಲ್ಲಿ ನಿರಂತರವಾಗಿ ಬೇಸಿಗೆ ಶಿಬಿರ ಆಯೋಜಿಸಿ ಈ ಶಿಬಿರಕ್ಕೆ ನಮ್ಮ ಶಾಲೆಯ ವಿದ್ಯಾರ್ಥಿಗಳನ್ನು ಸಹ ತೊಡಗಿಸಿಕೊಳ್ಳಲಾಗುವುದು ಎಂದು ಹೇಳಿದರು.

ಕಳೆದ ೨೦ ದಿನಗಳಿಂದ ಶಾಲೆ ಆವರಣದಲ್ಲಿ ನಡೆದ ಶಿಬಿರದಲ್ಲಿ ಪುಟ್ಟ ಪುಟ್ಟ ೪೫ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದರೂ ಸಹ ಒಂದು ಸಣ್ಣ ದೂರು ಇಲ್ಲದೆ ಸಮರ್ಪಕವಾಗಿ ನಿರ್ವಹಣೆ ಮಾಡಿದ ಜೋಕಾಲಿ ತಂಡದ ಕಾರ್ಯ ಶ್ಲಾಘನೀಯ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶಾಂತಿನಿಕೇತನ ಚಿತ್ರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ವಿಶ್ವಕರ್ಮ ಆಚಾರ್ಯ ಮಾತನಾಡಿ, ಈ ಶಿಬಿರದಲ್ಲಿ ಮಕ್ಕಳಿಗೆ ಚಿತ್ರಕಲೆ, ನಟನೆ, ಗಾಯನ ಸೇರಿದಂತೆ ಬೇರೆ ಬೇರೆ ಚಟುವಟಿಕೆಗಳಲ್ಲಿ ತರಬೇತಿ ನೀಡಲಾಗಿದೆ. ಮಕ್ಕಳು ಆಸಕ್ತಿ ತೋರುವ ವಿಷಯಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಪಾಲಕರು ಮಾಡಬೇಕು ಎಂದು ವಿನಂತಿಸಿದರು.

ತಮ್ಮ ಜೀವಮಾನವನ್ನು ಕಲೆಗಾಗಿಯೇ ಮೀಸಲಿರಿಸಿ ಕಾರ್ಯನಿರ್ವಹಿಸುತ್ತಿರುವ ಕಲಾವಿದರನ್ನು ಸರ್ಕಾರ ಮತ್ತು ನಾಗರಿಕರು ಪ್ರೋತ್ಸಾಹಿಸಿ ಪೋಷಿಸದಿದ್ದರೆ ಪ್ರತಿಭಾ ಪಲಾಯವಾಗುತ್ತದೆ. ಇದರಿಂದ ಸಮಾಜಕ್ಕೆ ಆಗುವ ನಷ್ಟದ ಬಗ್ಗೆ ನಾಗರಿಕರು ಮತ್ತು ಸರ್ಕಾರಗಳು ಜಾಗೃತೆ ವಹಿಸಬೇಕಿದೆ ಎಂದರು.

ಕನ್ನಡ ಮತ್ತು ಸಂಸ್ಕÈತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಮೇಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿಭಾನ್ವಿತ ಕಲಾವಿದರಿಗೆ ಕೊರತೆ ಇಲ್ಲ. ಅವರನ್ನು ಸದ್ಬಳಕೆ ಮಾಡಿಕೊಳ್ಳುವ ಕೆಲಸವಾಗಬೇಕಿದೆ. ಕನ್ನಡ ಮತ್ತು ಸಂಸ್ಕÈತಿ ಇಲಾಖೆ ಕಲಾವಿದರಿಗೆ ಅಗತ್ಯ ನೆರವು ನೀಡುತ್ತಿದ್ದು, ಮುಂದೆಯೂ ಈ ಕಾರ್ಯವನ್ನು ಮುಂದುವರಿಸುತ್ತದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜೆವಿಎಸ್ ಶಾಲೆಯ ಕಾರ್ಯದರ್ಶಿ ರತೀಶ್ ಇದ್ದರು. ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ವೆಂಕಟೇಶಮೂರ್ತಿ ಕನ್ನಡಕ್ಕೆ ಅನುವಾದಿಸಿ, ವಿನೀತ್‌ಕುಮಾರ್ ನಿರ್ದೇಶಿಸಿದ್ದ ಕಕ್ಕೇಶಿಯನ್‌ಚಾಕ್‌ಸರ್ಕಲ್ ನಾಟಕ ಮತ್ತು, ನವೀನ್ ಭೂಮಿ ಕನ್ನಡಕ್ಕೆ ಅನುವಾದಿಸಿ ಶಿವಮೊಗ್ಗದ ರಂಗನಾಥ್ ನಿರ್ದೇಶಿಸಿದ್ದ ರಾಜನಿಗೊಂದು ಉಡುಗೊರೆ ನಾಟಕವನ್ನು ಮನೋಜ್ಞವಾಗಿ ಪ್ರದರ್ಶಿಸಿದರು.

ಈ ಎರಡು ನಾಟಕಗಳ ಪ್ರಸಾಧನ ವಸ್ತಾçಲಂಕಾರ ನಿರ್ಮಲ ವೆಂಕಟೇಶ್ ನಿರ್ವಹಿಸಿದ್ದರು. ನಗರದ ಕಲಾವಿದ ಚಂದ್ರಶೇಖರ್ ಸಂಗೀತ ನಿರ್ವಹಣೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net