ರಂಗ ಕಲೆ ಬೆಳೆಸಲು ಬೇಕಿದೆ ಪ್ರೇಕ್ಷಕರ ಪ್ರೋತ್ಸಾಹ

CTD 1 NEWS NATAKA--04
Published on


ಚಿತ್ರದುರ್ಗ: ಮೊಬೈಲ್,ಸಾಮಾಜಿಕ ಜಾಲಾ ತಾಣಗಳು,ಸಿನಿಮಾ ಹಾಗೂ ಟಿವಿ ಧಾರವಾಹಿಗಳ ಅಬ್ಬರದ ನಡುವೆ ನಾಟಕಗಳನ್ನು ನೋಡುವವರ ಸಂಖ್ಯೆ ಕುಸಿಯುತ್ತಿದೆ. ಇದರಿಂದಾಗಿ ರಂಗ ಕಲಾವಿದರ ಬದುಕು ಸಂಕಷ್ಟಕ್ಕೆ ಸಿಲುಕುವಂತಾಗಿದೆ ಎಂದು ಬೆಂಗಳೂರು ನಗರ ಅಪರ ಸಿವಿ ಲ್ ಮತ್ತು ಸತ್ರ ನ್ಯಾಯಾಧೀಶ ಪ್ರಕಾಶ್ ಸಂ.ಹೆಳವರ ಹೇಳಿದರು.

ಬಹುಮುಖಿ ಕಲಾ ಕೇಂದ್ರ,ಮದಕರಿಪುರ ಕಾರಂಜಿ ಕಲ್ಚರಲ್ ಟ್ರಸ್ಟ್ ಹಾಗೂ ಚಿತ್ರದುರ್ಗ ಥಿಯೇಟರ್ ಫೋರ್ಟ್ ಆಶ್ರಯದಲ್ಲಿ ನ ಗರದ ತರಾಸು ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಬೆಂಗಳೂರು ರಂಗ ಪಯಣ ತಂಡದ ಶ್ರವಣಪ್ರಭಾ ಅವರ 55 ನಿಮಿ ಷಗಳ ಏಕ ವ್ಯಕ್ತಿ ಪ್ರದರ್ಶನ,‘ನಾಟಕದೊಳ್ ಕರ್ನಾಟಕ’ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು. ರಂಗ ಕಲೆ ಮತ್ತು ಕಲಾವಿದ ರನ್ನು ಉಳಿಸಲು ಬೆಳೆಸಲು ಪ್ರೇಕ್ಷಕರ ಪ್ರೋತ್ಸಾಹದ ಅಗತ್ಯವಿದೆ ಎಂದರು.

ಹಿರಿಯ ರಂಗ ನಟ ಮಲ್ಲಪ್ಪನಹಳ್ಳಿ ಮಹಾಲಿಂಗಯ್ಯ ಮಾತನಾಡಿ,ರಾಜ್ಯದ 31ಜಿಲ್ಲೆಗಳಲ್ಲಿ 31 ಕಲಾವಿದರು ಏಕಕಾಲಕ್ಕೆ ನಾಟಕ ಪ್ರ ದರ್ಶಿಸುತ್ತಿದ್ದಾರೆ ಎಂದರು. ಸಾಮಾಜಿಕ ಹೋರಾಟಗಾರ ಆರ್.ಶೇಷಣ್ಣಕುಮಾರ್ ಮಾತನಾಡಿ,ರಂಗಭೂಮಿ ರಂಗಕಲಾವಿದರಿಗೆ ಪ್ರೋತ್ಸಾಹವಿಲ್ಲದಂತಾಗಿದೆ ವಿಷಾದಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ್,ಅಧ್ಯಕ್ಷತೆ ವಹಿಸಿದ್ದ ರಚನಾ ಕಲಾ ಸಂಘದ ಅಧ್ಯಕ್ಷ ಎಂ.ಸಿ. ಮಂಜುನಾಥ್,ಲೇಖಕ ಎಚ್.ಆನಂದ್‌ಕುಮಾರ್ ಮಾತನಾಡಿದರು. ನ್ಯಾಯಾಧೀಶ ಶಂಕರ್‌ಕಲ್ಕರ್ಣಿ,ಉಪನ್ಯಾಸಕ ಆರ್.ಗು ರುರಾಜ್, ಬಹುಮುಖಿ ಕಲಾ ಕೇಂದ್ರದ ಕಾರ‌್ಯದರ್ಶಿ ಟಿ.ಮಧು,ರಂಗಕರ್ಮಿ ಹನುಮಂತಪ್ಪಪೂಜಾರ್ ಇದ್ದರು. ಹನುಮಂತ,ಚನ್ನಬಸ ಪ್ಪ,ಒ.ಮೂರ್ತಿ ರಂಗಗೀತೆಗಳನ್ನು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net