

ಚಿತ್ರದುರ್ಗ: ರಾಜ್ಯಸರ್ಕಾರದ ವಿವಿಧ ಗ್ಯಾರಂಟಿಗಳ ಫಲಾನುಭವಿಗಳ ಪೈಕಿ ಹಲವರ ಯಶೋಗಾಥೆ ಅರಿಯಲು ತಾಲೂಕು ಮಟ್ಟದಲ್ಲಿ ಶಿಬಿರ ಏ ರ್ಪಡಿಸುವಂತೆ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪ್ರಕಾಶ್ ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಕಚೇರಿಯಲ್ಲಿ ಶುಕ್ರವಾರ ಸಮಿತಿ ಸಭೆಯಲ್ಲಿ ಮಾತನಾಡಿ,ನಮ್ಮ ತಾಲೂಕಿನಲ್ಲಿ ಲಕ್ಷಾಂತರ ಜನರಿಗೆ ಗ್ಯಾರಂಟಿಗಳಿಂದ ಉಪಯೋಗವಾಗಿದ್ದು,ಹಲವರ ಯಶೋಗಾಥೆ ಅರಿಯಲು ಶೀಘ್ರ ಶಿಬಿರ ಏರ್ಪಡಿಸ ಬೇಕೆಂದರು.
ಗ್ಯಾರಂಟಿಗಳ ಅನುಷ್ಠಾನದಲ್ಲಿ ನಮ್ಮ ತಾಲೂಕು ಪ್ರಥಮ ಸ್ಥಾನ ಪಡೆಯಲು ಹೆಚ್ಚಿನ ಶ್ರಮ ಹಾಕ ಬೇಕು. ಇಲಾಖೆಗಳಿಗೆ ಬರುವಂಥ ಸಮಿತಿ ಸದಸ್ಯರನ್ನು ಗೌರವದಿಂದ ಕಾಣ ಬೇಕು. ಪ್ರತಿ ತಿಂಗಳು 10ರೊಳಗೆ ಗ್ಯಾರೆಂಟಿಗಳ ಮಾಹಿತಿ ನೀಡ ಬೇಕೆಂದು ಅಧಿಕಾರಿಗಳಿಗೆ ಸೂ ಚಿಸಿದರು.
ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ ಮಾತನಾಡಿ,ರಾಜ್ಯಸರ್ಕಾರದಿಂದಲೂ ಪಡಿತರ ವಿತರಿಸಲಾಗುತ್ತಿದೆ.ಆದ್ದರಿಂದ ಪ್ರಧಾನಿ ಭಾವಚಿತ್ರದೊಂದಿಗೆ,ಮುಖ್ಯಮಂತ್ರಿ,ಉಪಮುಖ್ಯಮಂತ್ರಿಗಳ ಭಾವಚಿತ್ರಗಳು ಇರಬೇಕೆಂದರು. ಉಪಾಧ್ಯಕ್ಷ ಡಿ.ಎನ್.ಮೈಲಾ ರಪ್ಪ ಮಾತನಾಡಿ,ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೀರಿನ ಸಮಸ್ಯೆ ಹಾಗೇ ಇದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಮಿತಿ ಸದಸ್ಯರಾದ ಪರಮಶಿವಯ್ಯ,ನಜ್ಮತಾಜ್, ಶಶಿಕಿರಣ್,ಆಶೋಕ್, ತಿಪ್ಪೇಸ್ವಾಮಿ, ಸೈಯದ್‌ಸಾಧಿಕ್ ,ದಿನೇಶ್,ಮಹಮ್ಮದ್, ಮು ದಾಸಿರ್‌ನವಾಜ್,ಮಂಜುನಾಥ್,ತಾಪಂ ಇಒ ರವಿಕುಮಾರ್ ಇದ್ದರು.
---