ಯೋಧರಿಗಾಗಿ ಬೈಕ್ ಮೆರವಣಿಗೆ

mysore
Published on

ಮೈಸೂರು: ಆಪರೇಷನ್ ಸಿಂಧೂರ ಮೂಲಕ ಉಗ್ರರಿಗೆ ಪ್ರತ್ಯುತ್ತರ ನೀಡುತ್ತಿರುವ ದೇಶದ ಯೋಧರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಟೀಂ ಮೈಸೂರು ವತಿಯಿಂದ ಭಾನುವಾರ ಬೈಕ್ ರ‌್ಯಾಲಿ ನಡೆಸಲಾಯಿತು.

ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ವೀರ ಯೋಧರಿಗೆ, ಅಕಾಲಿಕ ಮರಣಕ್ಕೆ ತುತ್ತಾದ ಮೈಸೂರಿನ ಪದ್ಮಶ್ರೀ ಪುರಸ್ಕೃತ ಡಾ.ಸುಬ್ಬಣ್ಣ ಅಯ್ಯಪ್ಪನ್ ಅವರಿಗೆ ಒಂದು ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.

ನಂತರ ಬೈಕ್ ರ‌್ಯಾಲಿ ಗಾಂಧಿ ವೃತ್ತ, ಸಯ್ಯಜಿರಾವ್ ರಸ್ತೆಯಲ್ಲಿ ಸಾಗಿ ಚಿಕ್ಕಗಡಿಯಾರದ ಮುಖಾಂತರ ದೇವರಾಜ ಅರಸು ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ ಮೂಲಕ ಶಾಂತಲಾ ಚಿತ್ರಮಂದಿರದ ಬಳಿ ಕೊನೆಗೊಂಡಿತು.

ಟೀಂ ಮೈಸೂರಿನ ಗೋಕುಲ್ ಗೋವರ್ಧನ್, ಯಶವಂತ್, ಕಿರಣ್ ಜೈರಾಮ್ ಗೌಡ, ಅನಿಲ್ ಜೈನ್, ಹರೀಶ್ ಬಾಬು, ಲಿಂಗರಾಜು, ರಾಮಪ್ರಸಾದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net