ಯೋಧರ ಧೈರ್ಯ, ತ್ಯಾಗ ಆದರ್ಶವಾಗಲಿ

Vpt-01-26-23
Published on

ವೀರಾಜಪೇಟೆ: ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧರ ಧೈರ್ಯ ಹಾಗೂ ತ್ಯಾಗ ದೇಶದ ಪ್ರತಿಯೊಬ್ಬ ನಾಗರಿಕನಿಗೆ ಆದರ್ಶ ಎಂದು ವೃತ್ತ ನಿರೀಕ್ಷಕ ಶಿವರುದ್ರ ಹೇಳಿದರು.
ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಕೊಡಗು ನಿವೃತ್ತ ಸೈನಿಕರ ಸಂಘದ ವತಿಯಿಂದ ಬುಧವಾರ ಪಟ್ಟಣದಲ್ಲಿನ ಹುತಾತ್ಮರ ಸ್ಮಾರಕದ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಹುತಾತ್ಮ ಯೋಧರನ್ನು ಪ್ರತಿಯೊಬ್ಬರೂ ನೆನೆಯುವಂತಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ವಹಿಸಿದ್ದರು. ಗ್ರೇಡ್ 2 ತಹಸೀಲ್ದಾರ್ ಪ್ರದೀಪ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಎ ಚಂದ್ರಕುಮಾರ್, ಇಸಿಎಚ್ ಕ್ಲಿನಿಕ್‌ನ ಲೆ.ಕರ್ನಲ್ ಲಕ್ಷ್ಮಿನಾರಾಯಣ, ಎಸ್.ಬಿ.ಐ ಶಾಖಾ ವ್ಯವಸ್ಥಾಪಕಿ ಉಮಾ, ನಿವೃತ್ತ ಸೈನಿಕರ ಸಂಘದ ಉಪಾಧ್ಯಕ್ಷ ಪುಗ್ಗೇರ ನಂದ, ಸಿ.ಎಸ್.ಡಿ ಕ್ಯಾಂಟಿನ್ ವ್ಯವಸ್ಥಾಪಕ ಡಾಲಿ, ಕೊಡವ ಸಮಾಜದ ಅಧ್ಯಕ್ಷ ಕುಂಬೇರ ಮನು ಕುಮಾರ್, ಕೊಡವ ಮುಸ್ಲಿಂ ಅಸೋಸಿಯೇಷನ್ ಅಧ್ಯಕ್ಷ ದುದ್ದಿಯಂಡ ಎಚ್.ಸೂಫಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net