ಯೋಧರ ಒಳಿತಿಗೆ ರೈತ ಸಂಘದಿಂದ ಪೂಜೆ ಸಲ್ಲಿಕೆ

15-KGL-1,,,,
Published on

ಕೊಳ್ಳೇಗಾಲ: ಭಾರತೀಯ ಸೇನೆಯ ಯೋಧರಿಗೆ ಮತ್ತಷ್ಟು ಶಕ್ತಿಯನ್ನು ಭಗವಂತ ಅನುಗ್ರಹಿಸಲಿ ಎಂಬ ವಿಶೇಷ ಸಂಕಲ್ಪದಡಿ ರೈತ ಸಂಘದ ಪದಾಧಿಕಾರಿಗಳು ಗುರುವಾರ ಪಟ್ಟಣದ ಬಸ್ ನಿಲ್ದಾಣ ಪಕ್ಕದಲ್ಲಿರುವ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ನಾಗರಾಜು ಮಾತನಾಡಿ, ಭಾರತೀಯ ಸೇನೆಯ ಹೆಸರಿನಲ್ಲಿ ಹಾಗೂ ಭಾರತೀಯ ಯೋಧರಿಗೆ ಒಳಿತಾಗುವುದರ ಜತೆಗೆ ಸೇನೆಗೆ ಮತ್ತಷ್ಟು ಶಕ್ತಿಯನ್ನು ಭಗವಂತನು ಕರುಣಿಸಲಿ ಎಂದು ಪೂಜೆ ನೆರವೇರಿಸಲಾಯಿತು. ಮುಂದೆಯೂ ನಮ್ಮ ಸೈನಿಕರಿಗೆ ಜಯ ಸಿಗುವಂತಾಗಲಿ ಎಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು ಎಂದರು.

ರಾಜ್ಯ ರೈತ ಸಂಘದ ಅಧ್ಯಕ್ಷ ನಾಗರಾಜು, ಕಾರ್ಯದರ್ಶಿ ರಾಮಕೃಷ್ಣ, ದಶರಥ, ಸೋಮಣ್ಣ, ತೇರಂಬಳ್ಳಿ ಮೂರ್ತಿ, ಸೋಮಣ್ಣ, ವಸಂತ್ ಕುಮಾರ್, ಮಹದೇವ, ನಂಜುಂಡಸ್ವಾಮಿ, ರಾಜಣ್ಣ, ಸರಗೂರು ವೀರಭದ್ರಸ್ವಾಮಿ, ಹಿತ್ತಲದೊಡ್ಡಿ ನಾಗರಾಜು, ವಾಸು, ಷಣ್ಮುಖ ಸ್ವಾಮಿ, ವೀರಭದ್ರಪ್ಪ, ಸದಾಶಿವ, ಚಂದ್ರಶೇಖರ್, ಜಗದೀಶ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net