ಯೋಧ ಮಲ್ಲಪ್ಪಗೆ ಅಂತಿಮ ನಮನ

11BLH8
Published on

ಬೈಲಹೊಂಗಲ: ಸಮೀಪದ ಸೊಗಲ ಗ್ರಾಮದ ಸಿಆರ್‌ಪಿಎಫ್ ಯೋಧ ಮಲ್ಲಪ್ಪ ವಿಠ್ಠಲ ಕಂಬಳಿ (ವನ್ನೂರ) (46) ಅವರ ಅಂತಿಮ ಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ಶನಿವಾರ ನೆರವೇರಿಸಲಾಯಿತು. ಯೋಧ ಮಲ್ಲಪ್ಪ ಹೈದರಾಬಾದ್‌ನಲ್ಲಿ 23 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದರು. ಕರ್ತವ್ಯದಲ್ಲಿರುವಾಗಲೇ ತೀವ್ರ ಅನಾರೋಗ್ಯದಿಂದ ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದರು. ಗ್ರಾಮಕ್ಕೆ ಮೃತ ಯೋಧನ ಪಾರ್ಥಿವ ಶರೀರ ಆಗಮಿಸುತ್ತಿದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ಯೋಧನಿಗೆ ತಾಯಿ, ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಬೆಟಾಲಿಯನ್ ಸೇನೆಯ ಯೋಧರು ಸೇನಾ ಗೌರವ ಸಲ್ಲಿಸಿದರು.

ಅದ್ದೂರಿ ಮೆರವಣಿಗೆ: ಯೋಧನ ಪಾರ್ಥಿವ ಶರೀರವನ್ನು ಸಕಲ ಸರ್ಕರಿ ಗೌರವಗಳೊಂದಿಗೆ ವಾಹನದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಮೆರವಣಿಗೆಯಲ್ಲಿ ಗ್ರಾಮಸ್ಥರು ಜವಾನ್ ಮಲ್ಲಪ್ಪ ಅಮರ್ ರಹೇ.. ಅಮರ್ ರಹೇ..ಮಲ್ಲಪ್ಪ ಅಮರ್ ರಹೇ..ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಗ್ರಾಪಂ ಮುಂದೆ ಅಧ್ಯಕ್ಷರು, ಸದಸ್ಯರು
ಪುಷ್ಪ ನಮನ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net