

ಧಾರವಾಡ: ಭಾರತದ ವನ್ಯಜೀವಿ ಸಂರಕ್ಷಣಾ ಸಂಸ್ಥೆ ರೂಪಿಸಿದ ಗಂಗಾನದಿ ಜಲಾನಯನ ಪ್ರದೇಶದಲ್ಲಿ ನದಿ ಸ್ವಚ್ಛಗೊಳಿಸುವಿಕೆ ಹಾಗೂ ಅಲ್ಲಿನ ಜಲಚರಗಳ ಸಂರಕ್ಷಣೆ, ಪರಿಸರ ನಿರ್ವಹಣೆ ಕುರಿತ ಯೋಜನೆಗೆ ನಗರದ ಜೆಎಸ್‌ಎಸ್ ಬನಶಂಕರಿ ಕಲಾ, ವಾಣಿಜ್ಯ ಹಾಗೂ ಶಾಂತಿಕುಮಾರ ಗುಬ್ಬಿ ವಿಜ್ಞಾನ ಕಾಲೇಜಿನ ಬಿಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿ ಸುಹಾಶ್ಚಂದ್ರ ಹೆಗಡೆ ಆಯ್ಕೆಯಾಗಿದ್ದಾರೆ.
ಯೋಜನೆಗೆ ಅಖಿಲ ಭಾರತ ಮಟ್ಟದಲ್ಲಿ ಬಂದಿದ್ದ 1700 ಅರ್ಜಿಗಳ ಅಭ್ಯರ್ಥಿಗಳಲ್ಲಿ ಕಾಲೇಜಿನ ವಿದ್ಯಾರ್ಥಿ ಯೋಜನಾ ಸಹಾಯಕನಾಗಿ ಆಯ್ಕೆಯಾಗಿದ್ದಾನೆ. 19 ವರ್ಷಗಳ ನಂತರ ಈ ಯೋಜನೆಗೆ ಕರ್ನಾಟಕದಿಂದ ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಈತ ಎರಡನೇ ವ್ಯಕ್ತಿ.
ವಿದ್ಯಾರ್ಥಿಯ ಸಾಧನೆಗೆ ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಅಭಿವೃದ್ಧಿ ಅಧಿಕಾರಿ ಡಾ. ಸೂರಜ್ ಜೈನ್, ಪ್ರಾಂಶುಪಾಲ ಡಾ. ವೈ. ಜಯಮ್ಮ ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.