

ಬಾಗಲಕೋಟೆ: ಕೇಂದ್ರ ಸರ್ಕಾರ ರೈತರಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿದ್ದು, ಅವುಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ೨೦೨೩-೨೪ ನೇ ಸಾಲಿನ ಪ್ರಥಮ ತ್ರೈಮಾಸಿಕ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವರು ಸಾಕಷ್ಟು ಯೋಜನೆಗಳ ಬಗ್ಗೆ ರೈತರಿಗೆ ಅರಿವು ಇರುವದಿಲ್ಲ. ಎಲ್ಲ ಯೋಜನೆಗಳ ಕುರಿತು ಜಾಗೃತಿ ಕೊಡಿಸಿ ಅವು ರೈತರಿಗೆ ತಲುಪವಂತೆ ಮಾಡಿ. ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವ ನಿಜವಾದ ಮತ್ತು ಆಸಕ್ತ ರೈತರು ಫಲಾನುಭವಿಗಳಾಗುವಂತೆ ಮಾಡಬೇಕು. ಪ್ರಧಾನ ಮಂತ್ರಿ ಫಸಲ ವೀಮಾ ಯೋಜನೆಯಡಿ ರೈತರು ಇನ್ಸೂರನ್ಸ್ ಕಟ್ಟುವುದು ಕಡಿಮೆಯಾಗಿದೆ. ಈ ಕುರಿತು ರೈತರಿಗೆ ಸೂಕ್ತ ತಿಳುವಳಿಕೆ ನೀಡುವ ಕೆಲಸ ಮಾಡಬೇಕು ಎಂದರು.
ಅತಿವೃಷ್ಠಿ ಅಥವಾ ಅನಾವೃಷ್ಠಿಯಿಂದ ಬೆಳೆದ ಬೆಳೆಗಳು ಹಾಳಾದರೆ ರೈತರಿಗೆ ಪರಿಹಾರ ದೊರಕಬೇಕು ಎಂಬ ಮಹತ್ವಾಕಾಂಕ್ಷೆಯಲ್ಲಿ ಕೇಂದ್ರ ಸರ್ಕಾರ ಫಸಲ ಬಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಆದರೆ, ಜಿಲ್ಲೆಯ ಕೇವಲ ೧೦ ಸಾವಿರ ಜನ ರೈತರು ಫಸಲ ಬಿಮಾದಡಿ ಬೆಳೆಗಳಿಗೆ ವಿಮಾ ಮಾಡಿಸಿದ್ದಾರೆ. ಅಂದರೆ ಈ ಬಗ್ಗೆ ರೈತರಲ್ಲಿ ಜಾಗೃತಿ ಇಲ್ಲ. ಇಲಾಖೆ ಅಽಕಾರಿಗಳು ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕಿದೆ. ಈ ಬಾರಿ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಮಾಡಿದ ಬೆಳೆಗಳು ಬರದೇ ರೈತರು ನಷ್ಟ ಅನುಭವಿಸಿದರು. ಅದೇ ಎಲ್ಲರು ಫಸಲ ಬಿಮಾದಡಿ ವಿಮಾ ಮಾಡಿಸಿದ್ದರೆ ಅವರಿಗೆ ತಕ್ಕ ಮಟ್ಟಿಗೆ ಪರಿಹಾರವಾದರು ದೊರಕುತ್ತಿತ್ತು ಎಂದರು.
ಸಭೆಯಲ್ಲಿ ರಾಜ್ಯ ದೀಶಾ ಸಮಿತಿ ಸದಸ್ಯ ಯಲ್ಲಪ್ಪ ಬೆಂಡಿಗೇರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಾನಾಧಿಕಾರಿ ಶಶಿಧರ ಕುರೇರ, ಎಡಿಸಿ ಪರಶುರಾಮ ಶಿನ್ನಾಳಕರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅಮರೇಶ ನಾಯಕ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಽಕಾರಿಗಳು ಇದ್ದರು