ಯೋಜನೆ ಲಾಭ ಪಡೆದುಕೊಳ್ಳಲಿ

7ARATAL1
Published on

ಅರಟಾಳ: ರೈತರ ಅನುಕೂಲದ ದೃಷ್ಟಿಯಿಂದ ರಿವಾರ್ಡ್ ಯೋಜನೆಯಡಿ ಆಯ್ಕೆಯಾದ ಸುಮಾರು ೩೫ ರೈತರಿಗೆ ಸ್ಪಿಂಕ್ಲರ್ ಪೈಪ್ ವಿತರಿಸಲಾಗುತ್ತಿದೆ ಎಂದು ತೆಲಸಂಗ ಕೃಷಿ ಅಧಿಕಾರಿ ನಾಮದೇವ ಲಮಾಣಿ ಹೇಳಿದರು.

ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ಶುಕ್ರವಾರ ರಿವಾರ್ಡ್ ಯೋಜನೆಯಡಿ ಆಯ್ಕೆಯಾದ ರೈತರಿಗೆ ಸ್ಪಿಂಕ್ಲರ್ ಪೈಪ್ ವಿತರಿಸಿ ಮಾತನಾಡಿ, ಸರ್ಕಾರದ ರಿವಾರ್ಡ್ ಯೋಜನೆಯಡಿ ರೈತರು ಕೃಷಿ ಹೊಂಡ, ಬದು ನಿರ್ಮಾಣ, ಸ್ಪಿಂಕಲರ್ ಪೈಪ್, ಚಾಪ್ ಕಟರ್ ಪಡೆದುಕೊಳ್ಳುತ್ತಾರೆ. ತೆಲಸಂಗ ವ್ಯಾಪ್ತಿಯ ಹಾಲಳ್ಳಿ ಮತ್ತು ಅರಟಾಳ ಗ್ರಾಮದಲ್ಲಿ ರಿವಾರ್ಡ್ ಯೋಜನೆ ಪ್ರಾರಂಭವಾಗಿದ್ದು, ರೈತರು ಯೋಜನೆಯ ಲಾಭ ಪಡೆದುಕೊಳ್ಳಬೇಕು. ಹಂತ ಹಂತವಾಗಿ ಯೋಜನೆಯಡಿ ಬಂದ ಕೃಷಿ ಉಪಕರಣ ವಿತರಿಸಲಾಗುವುದು ಎಂದರು.

ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಹನುಮಂತ ಪೂಜಾರಿ, ಯಲ್ಲಪ್ಪ ಹಟ್ಟಿ, ಮಲ್ಲಿಕಾರ್ಜುನ ತೆಲಸಂಗ, ವಿಠ್ಠಲ ಹಟ್ಟಿ, ಶ್ರೀಶೈಲ ಪೂಜಾರಿ, ಕಾಶಪ್ಪ ಪೂಜಾರಿ, ಮಲ್ಲಕರಿ ಪೂಜಾರಿ, ಹನುಮಂತ ತೆಲಸಂಗ, ಶಶಿಕಾಂತ ಹಿರೇಕುರಬರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net