

ಹುಮನಾಬಾದ್: ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಮಹತ್ವದ್ದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಇಂಜಿನಿರ‍್ಸ್ ಸಂಘದಿಂದ ಸರ್.ಎಂ.ವಿಶೇಶ್ವರಯ್ಯ ಜನ್ಮದಿನದ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಇಂಜಿನಿಯರ್ ದಿನಾಚರಣೆಯಲ್ಲಿ ಮಾತನಾಡಿ, ಯೋಜನಾ ಬದ್ಧವಾಗಿ ಕೆಲಸ ನಡೆದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ಸಿವಿಲ್, ತಾಂತ್ರಿಕ ಸೇರಿ ಇತರ ಕ್ಷೇತ್ರದ ಹೊಸ ಆವಿಷ್ಕಾರಗಳಲ್ಲಿ ಇಂಜಿನಿರ‍್ಸ್ ಪಾತ್ರ ಗಣನೀಯ ಎಂದರು.
ಸಂಘದ ಉಪಾಧ್ಯಕ್ಷ ಸುಭಾಷ ಗಂಗಾ ಮಾತನಾಡಿ, ವೃತ್ತಿ ಪಾವಿತ್ರ್ಯ ಕಾಪಾಡಿಕೊಳ್ಳಬೇಕು. ಇಂಜಿನಿಯರ್ ವೃತ್ತಿ ಶ್ರೇಷ್ಠವಾದದ್ದು. ಆದರೆ, ಇಂಜಿನಿರ‍್ಸ್ ಯೋಜನೆಗಳು ಪೂರ್ಣರೂಪ ಪಡೆಯಲು ನಿರ್ಮಾಣ ವಿಭಾಗದ ಪ್ರತಿ ಕುಶಲಕರ್ಮಿಗಳ ಪಾತ್ರ ಅಷ್ಟೇ ಮುಖ್ಯವಾದದ್ದು ಎಂದರು.
ಲೋಕೋಪಯೋಗಿ ಇಲಾಖೆ ಎಇಇ ಸುನೀಲಕುಮಾರ ಪ್ರಭಾ, ಜೆಸ್ಕಾಂ ಇಇ ಶಂಕರ ಮಾತನಾಡಿ, ವಿಶ್ವೇಶ್ವರಯ್ಯನ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಟ್ಟಡ ನಿರ್ಮಾಣದ ವಿವಿಧ ವಿಭಾಗಗಳ ಕುಶಲಕರ್ಮಿಗಳನ್ನು ಸಂಘದಿಂದ ಸನ್ಮಾನಿಸಲಾಯಿತು. ಇಂಜಿನಿಯರ್‌ಗಳಾದ ಸಿ.ಕೆ.ಪಾಟೀಲ್, ವಿಜಯಕುಮಾರ ರುದ್ರನೂರ, ಸೈಯದ್ ಖಾಜಾ, ಗಣಪತಿ ಸಂಗಮ, ರಾಜು ಜಾಜಿ, ರಾಘವೇಂದ್ರ ವಿಭೂತಿ, ಎಂ.ಡಿ.ಅಬ್ದುಲ್, ವಿನಾಯಕ ರಘೋಜಿ, ಸಂಗಮೇಶ ಪಾಟೀಲ್, ವಿನೋದ ಭೀಮಶೆಟ್ಟಿ, ಲಿಂಗರಾಜ ತುಪ್ಪದ್, ಪ್ರವೀಣಕುಮಾರ ಇತರರಿದ್ದರು.