

ಚಿಕ್ಕಮಗಳೂರು: ಸಿ.ಪಿ.ಯೋಗೇಶ್ವರ್ ಒಬ್ಬ ಸ್ವಾರ್ಥ ರಾಜಕಾರಣಿ. ಅವರು ಪಕ್ಷ ತೊರೆದಿರುವುದರಿಂದ ಬಿಜೆಪಿಗೆ ಯಾವುದೇ ನಷ್ಟವಿಲ್ಲ ಎಂದು ರಾಜ್ಯ ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಿ.ಪಿ.ಯೋಗೇಶ್ವರ್ ಅವರಿಗೆ ನಮ್ಮ ಪಕ್ಷ ಎಲ್ಲ ರೀತಿಯ ಸ್ಥಾನಮಾನಗಳನ್ನು ನೀಡಿತ್ತು. ಜೊತೆಗೆ ಅವರನ್ನು ಗೌರವದಿಂದ ನಡೆಸಿಕೊಳ್ಳಲಾಗಿತ್ತು. ಆದರೆ, ಸ್ವಾರ್ಥ ರಾಜಕಾರಣ ಮಾಡುತ್ತಿದ್ದ ಅವರು ಎಂದೂ ಪಕ್ಷದ ಸಂಘಟನೆಗೆ ಆಸಕ್ತಿ ತೋರಲೇ ಇಲ್ಲ. ಅವರು ಇಂದು ಸ್ವಾರ್ಥ ಸಾಧನೆಗಾಗಿ ಪಕ್ಷವನ್ನು ತೊರೆದಿದ್ದಾರೆ ಎಂದು ತಿಳಿಸಿದ್ದಾರೆ.
ಯೋಗೇಶ್ವರ್ ಎಂದೂ ಜನಪರವಾದ ಕೆಲಸಗಳಲ್ಲಿ ತೊಡಗಿಸಿಕೊಂಡಿರಲಿಲ್ಲ. ಕೇವಲ ತನ್ನ ಹಿತ ಮತ್ತು ಸ್ವಾರ್ಥ ಸಾಧನೆಯ ಕೆಲಸಗಳಲ್ಲಿ ತೊಡಗಿರುತ್ತಿದ್ದರು. ಒಂದು ರೀತಿಯಲ್ಲಿ ಅವರು ಪಕ್ಷಕ್ಕೆ ಹೊರೆಯೇ ಆಗಿದ್ದರು. ಅವರು ಪಕ್ಷದಿಂದ ಹೊರ ನಡೆದಿರುವುದು ಒಂದು ಹಂತದಲ್ಲಿ ಪಕ್ಷಕ್ಕೆ ಒಳಿತೆ ಆಗಿದೆ ಎಂದು ಹೇಳಿದ್ದಾರೆ.
ಅವರು ಎಷ್ಟು ನಿಷ್ಪçಯೋಜಕ ಎಂಬುದನ್ನು ಚನ್ನಪಟ್ಟಣದ ಜನ ಚನ್ನಾಗಿ ಬಲ್ಲವರಾಗಿದ್ದಾರೆ. ಮುಂದಿನ ದಿನಗಳಲ್ಲಿ ಜನರು ಅವರಿಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.