ಯೋಗಿ ಮಾದರಿ ಅನುಸರಿಸಿದರೆ ಸರ್ವನಾಶ

Capture1
Published on

ಬೀದರ್: ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾಡಲ್ (ಮಾದರಿ) ಅನುಸರಿಸಿದರೆ ಕನರ್ಾಟಕದಲ್ಲಿ ಬಿಜೆಪಿ ಸರ್ವನಾಶ ಆಗಲಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಕಲ್ಯಾಣ ಕನರ್ಾಟಕ ವಿಭಾಗದ ಜೆಡಿಎಸ್ ಸಮಾಲೋಚನೆ ಸಭೆಗೆ ಶುಕ್ರವಾರ ಇಲ್ಲಿಗೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಯುಪಿ ಮಾದರಿ ಕ್ರಮದ ಕುರಿತು ಮಾತನಾಡಿದ್ದಾರೆ. ಹೇಳಲು ಸರಿ ಕಾಣುತ್ತದೆ. ಈ ರೀತಿ ರಾಜ್ಯದಲ್ಲಿ ಮಾಡಲು ಹೋದರೆ ಬೆಂಕಿ ಹತ್ತಲಿದೆ. ಉತ್ತರ ಪ್ರದೇಶ ಬೇರೆ, ಇಲ್ಲಿನ ಆಡಳಿತವೇ ಬೇರೆ ಎಂದರು.

ಬಿಜೆಪಿ, ಕಾಂಗ್ರೆಸ್ ಕರಾವಳಿಯಲ್ಲಿ 15 ವರ್ಷದಿಂದ ಮತ ಪಡೆಯಲು ಧಾಮರ್ಿಕ ವಿಷಬೀಜ ಬಿತ್ತುತ್ತಿವೆ. ಶವದ ಮೇಲೆ ರಾಜಕಾರಣ ಮಾಡುತ್ತಿವೆ. ಸಕರ್ಾರದ ಕ್ರಮಗಳಿಂದ ಬೇಸತ್ತು ಆ ಪಕ್ಷದವರು ಸಾಮೂಹಿಕ ರಾಜೀನಾಮೆ ನೀಡುತ್ತಿದ್ದಾರೆ. ಕರಾವಳಿ ಭಾಗದಿಂದಲೇ ಬಿಜೆಪಿ ಪತನ ಶುರುವಾಗಿದೆ ಎಂದು ಹೇಳಿದರು.
ನಾನು ಎರಡು ಬಾರಿ ಸಿಎಂ ಆಗಿದ್ದಾಗ ಇಂಥ ಒಂದೇ ಒಂದು ಘಟನೆ, ಕೋಮುಗಲಭೆ ನಡೆದಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಕಿತ್ತಾಟದಿಂದ ಕರಾವಳಿ ಭಾಗ ಉದ್ವಿಗ್ನಗೊಂಡಿದೆ. ಶಾಂತಿ, ಸೌಹಾರ್ದ ಕಾಪಾಡಬೇಕಾದರೆ ಅಲ್ಲಿನ ಜನ ಎರಡೂ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ನಮ್ಮೂರಲ್ಲಿ ಆರೋಗ್ಯ ಕೇಂದ್ರ ಇದ್ದರೆ ಪತಿ ಉಳಿಯುತ್ತಿದ್ದರು ಎಂದು ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಪತ್ನಿ ಹೇಳಿದ್ದು ಸರಿ ಇದೆ. ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಗಳ ಸ್ಥಿತಿ ಹೇಗಿದೆ ಎಂಬುದನ್ನು ತೋರಿಸಿಕೊಡುತ್ತದೆ. ಸಕರ್ಾರ, ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡರೆ ಇಂಥ ಪರಿಸ್ಥಿತಿ ಬರುತ್ತಿರಲಿಲ್ಲ.
| ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net