ಯೋಗದಿಂದ ಸಾಮಾಜಿಕ ಸ್ವಾಸ್ಥೃ ಸಾಧ್ಯ- ಕುರ್ಕಿ ಸರ್ಕಾರಿ ಶಾಲೆಯಲ್ಲಿ ಯೋಗ ದಿನಾಚರಣೆ

IMG-20230621-WA0032.jpg
Published on

ದಾವಣಗೆರೆ: ಯೋಗ ಭಾರತೀಯ ಪರಂಪರೆಯ ಮೂಲ ಸತ್ವ. ಯೋಗದಿಂದ ಆರೋಗ್ಯ, ನೆಮ್ಮದಿ, ಶಾಂತಿ ಹಾಗೂ ಸಾಮಾಜಿಕ ಸ್ವಾಸ್ಥೃ ಕಾಪಾಡಬಹುದು ಎಂದು ಕುರ್ಕಿಯ ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಜಿ.ರೇವಣಸಿದ್ದಪ್ಪ ಗೌಡ್ರು ಹೇಳಿದರು.

ತಾಲೂಕಿನ ಕುರ್ಕಿ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ 9ನೇ ವಿಶ್ವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಯೋಗದಿಂದ ಆರೋಗ್ಯ ಉತ್ತಮವಾಗುತ್ತದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಮೂಡಲಿದೆ. ಆದ್ದರಿಂದ ಪ್ರತಿಯೊಬ್ಬರು ದಿನದ ಅರ್ಧ ಗಂಟೆಯಾದರೂ ಯೋಗಾಭ್ಯಾಸ ಮಾಡಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ದಾವಣಗೆರೆಯ ವಿಎಸ್ಸೆಸ್ಸೆನ್ ಮಾಜಿ ಅಧ್ಯಕ್ಷ ಕೆ.ಜಿ.ವೇದಮೂರ್ತಿಗೌಡ್ರು ಮಾತನಾಡಿ ವಿಶ್ವಸಂಸ್ಥೆಯ ವೇದಿಕೆಯಲ್ಲಿ ನಡೆಯಲಿರುವ 9ನೇ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ವಿಶ್ವದ 180 ರಾಷ್ಟ್ರಗಳ ಗಣ್ಯರು ಸಾಕ್ಷಿಯಾಗುತ್ತಿದ್ದಾರೆ. ಭಾರತದ ಯೋಗ ಇಂದು ಜಾಗತಿಕ ಮನ್ನಣೆ ಗಳಿಸಿದೆ ಎಂದು ತಿಳಿಸಿದರು.

ಅಧ್ಯಾಪಕ ಸಿ.ಜಿ.ಜಗದೀಶ್ ಕೂಲಂಬಿ ಮಾತನಾಡಿ ಈ ವರ್ಷ ವಸುದೈವ ಕುಟುಂಬಕಂ ಎಂಬ ಘೋಷ ವಾಕ್ಯದಡಿ ವಿಶ್ವ ಯೋಗ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ಮುಖ್ಯ ಶಿಕ್ಷಕ ಆರ್. ಗಣೇಶಾಚಾರಿ, ಗ್ರಾಪಂ ಅಧ್ಯಕ್ಷ ಬಿ.ಜಿ.ನಂದ್ಯಪ್ಪ, ಸದಸ್ಯರಾದ ಬಸಣ್ಣ, ಕೆ ವಿ ಓಂಕಾರಪ್ಪ, ಸದಸ್ಯ ಕೆ.ಜೆ.ನಾಗರಾಜ್ ಮಾತನಾಡಿದರು. ದೈಹಿಕ ಶಿಕ್ಷಕ ರಾಘವೇಂದ್ರ ಸೂರ್ಯ ನಮಸ್ಕಾರ, ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ವಜ್ರಾಸನ, ಭುಜಂಗಾಸನ ಮತ್ತಿತರೆ ಯೋಗಾಸನಗಳನ್ನು ಹೇಳಿಕೊಟ್ಟರು. ಶಾಲೆಯ ಶಿಕ್ಷಕರು, ಪಾಲಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net