ಯೋಗದಿಂದ ಮಾನಸಿಕ ಒತ್ತಡ ನಿವಾರಣೆ

28npn1
Published on

ನಿಪ್ಪಾಣಿ: ಮಾನಸಿಕ ಒತ್ತಡದಿಂದ ಹೊರಬರಲು ನಿತ್ಯ ಯೋಗ, ಪ್ರಾಣಾಯಾಮ ರೂಢಿಸಿಕೊಳ್ಳಬೇಕು ಎಂದು ಪತಂಜಲಿ ಯೋಗಪೀಠದ ರಾಜ್ಯ ಪ್ರಭಾರಿ ಭವರಲಾಲ್ ಆರ್ಯ ಹೇಳಿದರು.

ನಗರದ ಮರಾಠ ಮಂಡಳ ಸಾಂಸ್ಕೃತಿಕ ಭವನದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ, ನಗರದಲ್ಲಿ ಜೂ.೨೧ರಂದು ಯೋಗ ದಿನ ಅದ್ದೂರಿಯಾಗಿ ಆಚರಿಸಲಾಗುವುದು. ನಗರದ ಎಲ್ಲ ವಾರ್ಡ್ಗಳಲ್ಲಿ ಉಚಿತ ಯೋಗ ತರಗತಿ ನಡೆಸಲು ಪ್ರಯತ್ನಿಸಲಾಗುವುದು ಎಂದರು.

ಪತಂಜಲಿ ಯೋಗ ಪೀಠದ ಶಿಕ್ಷಕ ಪ್ರಶಾಂತ ರಾಮನಕಟ್ಟಿ ಮಾತನಾಡಿ, ನಗರದಲ್ಲಿ ಬೆಳಗ್ಗೆ ೫.೩೦ರಿಂದ ನಿರಂತರ ಹಾಗೂ ಉಚಿತವಾಗಿ ಯೋಗ ತರಗತಿ ನಡೆಯಲಿವೆ ಎಂದರು. ಪತಂಜಲಿ ಯೋಗಪೀಠದ ಉತ್ತರ ಕರ್ನಾಟಕದ ಪ್ರಭಾರಿ ಕಿರಣ ಮನ್ನೋಳ್ಕರ್, ಬಾಳಕೃಷ್ಣ ಕೋಳೆಕರ, ವಿನಾಯಕ ಶಿಪ್ಪುರೆ, ನಗರಸಭೆ ಮಾಜಿ ಅಧ್ಯಕ್ಷ ಜಯವಂತ ಭಾಟಲೆ, ವಿಜಯ ಟವಳೆ, ಜೆ.ಡಿ.ಶಿಂಧೆ, ದಶರಥ ಕುಂಬಾರ, ಭೂಪೇಂದ್ರ ಕುರಬೆಟ್ಟಿ, ರವಿ ಖೋತ, ವಿಶ್ವನಾಥ ಢೇಕಳೆ, ರವಿ ಕದಮ್, ಆಶಾ ತಿಳವೆ, ಸುಪ್ರಿಯಾ ಭುಸಾರಿ, ಶೋಭಾ ವಡಗಾವೆ, ಪ್ರಣವ ಮಾನವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net