

ತುಮಕೂರು: ಪ್ರೆಸ್ ಕ್ಲಬ್ ತುಮಕೂರು ವತಿಯಿಂದ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿರುವ ಆಲದಮರದ ಪಾರ್ಕ್ನಲ್ಲಿ ಯೋಗ ದಿನಾಚರಣೆ ನಡೆಯಿತು.
"ಯೋಗ ಟೂ ಫಿಟ್' ಎಂಬ ೂಷವಾಕ್ಯದಲ್ಲಿ ಆಯೋಜಿಸಿದ್ದ ಯೋಗ ದಿನಾಚರಣೆಗೆ ಶಾಸಕ ಜಿ.ಬಿ.ಜ್ಯೋತಿಗಣೇಶ್ ಚಾಲನೆ ನೀಡಿದರು. ಪ್ರಧಾನಿ ನರೇಂದ್ರಮೋದಿ ಯೋಗಕ್ಕೆ ವಿಶ್ವಮನ್ನಣೆ ತಂದುಕೊಟ್ಟಿದ್ದು ಇಂದು ದೇಶದೆಲ್ಲೆಡೆ ಯೋಗದ ಉಪಯೋಗ ಸಾರಲಾಗುತ್ತಿದೆ ಎಂದು ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ಅನುಪಯುಕ್ತವಾಗಿದ್ದ ಆಲದಮರ ಪಾರ್ಕ್ ಇಂದು ಸದುಪಯೋಗವಾಗಿದೆ, ಜನೋಪಯೋಗಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ಪಾರ್ಕ್ಗೆ ತುಮಕೂರು ಪ್ರೆಸ್ ಕ್ಲಬ್ ಮೆರುಗು ತಂದಿದೆ ಎಂದರು.
ಬಿಜೆಪಿ ಮುಖಂಡ ಅರಕೆರೆ ರವೀಶ್ ಮಾತನಾಡಿ, ಇಂದಿನ ಒತ್ತಡದ ಜೀವನ ಶೈಲಿಯಲ್ಲಿ ಎಲ್ಲರೂ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ, ಈ ಒತ್ತಡದಿಂದ ಪಾರಾಗಲು ಯೋಗ ಪರಿಣಾಮಕಾರಿ ಎನ್ನಿಸಿದ್ದು ಎಲ್ಲರೂ ಅಭ್ಯಾಸ ಮುಂದುವರಿಸೋಣ ಎಂದರು.
ಪಾಲಿಕೆ ಸದಸ್ಯೆ ಗಿರಿಜಾ ಧನ್ಯಕುಮಾರ್ ಮಾತನಾಡಿ, ಯೋಗ ಜೀವನದ ಅವಿಭಾಜ್ಯ ಅಂಗವಾಗಬೇಕು, ಎಲ್ಲರೂ ಕಡ್ಡಾಯವಾಗಿ ಯೋಗದ ಅಭ್ಯಾಸವನ್ನು ಪ್ರತಿನಿತ್ಯ ಮಾಡಬೇಕು ಎಂದರು.
ತಹಸೀಲ್ದಾರ್ ಮೋಹನ್ಕುಮಾರ್, ಸರ್ಕಾರಿ ನೌಕರರ ಸಂದ ಜಿಲ್ಲಾಧ್ಯಕ್ಷ ನರಸಿಂಹರಾಜು, ಫಿಟ್ನೋಲಿಕ್ ಜಿಮ್ ಮುಖ್ಯಸ್ಥೆ ಶರ್ಮಿಳಾ, ಅಮೋ ನ್ಯೂಸ್ ಮುಖ್ಯಸ್ಥ ಶ್ರೀನಿವಾಸರೆಡ್ಡಿ, ಪ್ರೆಸ್ ಕ್ಲಬ್ ನಿರ್ದೇಶಕರಾದ ಸತೀಶ್, ದಾದಪೀರ್, ಎನ್ಸಿಸಿ ಅಧಿಕಾರಿ ಪ್ರದಿಪ್ಕುಮಾರ್, ಯೋಗ ಶಿಕ್ಷಕರಾದ ಶ್ರೀನಿವಾಸ್, ಗೀತಾಂಜಲಿ ಮತ್ತಿತರರು ಇದ್ದರು.