

ಕಲಬುರಗಿ: ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಷ್ಟçಮಟ್ಟದ ಯೋಗ ಸ್ಪರ್ಧೆಯಲ್ಲಿ ಭೂಮಿ ಯೋಗ ಫೌಂಡೇಷನ್‌ನ ವಿದ್ಯಾರ್ಥಿಗಳಾದ ನೇಸರ ಎನ್. ಗುತ್ತೇದಾರ್, ಅನುಶ್ರೀ ಎನ್. ಗುತ್ತೇದಾರ್ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
೮ ರಿಂದ ೧೨ ಹಾಗೂ ೧೨ ರಿಂದ ೧೫ ವರ್ಷದ ಮಕ್ಕಳಿಗಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಕರ್ನಾಟಕ, ಕೇರಳ, ತಮಿಳನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟç ಸೇರಿ ವಿವಿಧ ರಾಜ್ಯಗಳಿಂದ ಸುಮಾರು ೩೦೦ಕ್ಕೂ ಹೆಚ್ಚಿನ ಸ್ಪರ್ಧಿಗಳು ಭಾಗವಹಿಸಿದ್ದರು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನುಶ್ರೀ ಹಾಗೂ ನೇಸರ ದ್ವಿತೀಯ ಸ್ಥಾನ ಪಡೆದು ಮಿಂಚಿದ್ದಾರೆ. ಇವರಿಬ್ಬರೂ ಸಹೋದರಿಯರಾಗಿದ್ದು, ಇದು ಮೂರನೇ ಬಾರಿಗೆ ರಾಷ್ಟçಮಟ್ಟದ ಪ್ರಶಸ್ತಿ ಪಡೆದು ಸಾಧನೆ ಮೆರೆದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಫೌಂಡೇಷನ್ ಅಧ್ಯಕ್ಷ ನಾಗರಾಜ ಆರ್. ಸಾಲೋಳ್ಳಿ, ಕಾರ್ಯದರ್ಶಿ ವಿಶಾಲಾಕ್ಷಿ ಬಿ. ಘಂಟಿ, ಪಾಲಕರಾದ ನರಸಯ್ಯ ಗುತ್ತೇದಾರ್, ಲಕ್ಷಿö್ಮÃ ಗುತ್ತೇದಾರ್ ಸಂತಸ ವ್ಯಕ್ತಪಡಿಸಿದ್ದಾರೆ.