

ಹುಬ್ಬಳ್ಳಿ: ಯೋಗ, ಧ್ಯಾನ, ಅಗ್ನಿ ಹೋತ್ರ, ಭಜನೆ, ಸತ್ಸಂಗದೊಂದಿಗೆ ಹೊಸ ವರ್ಷ (2025)ವನ್ನು ಸ್ವಾಗತಿಸಬೇಕೆಂದು ಪತಂಜಲಿ ಯೋಗ ಪೀಠ ಕರ್ನಾಟಕದ ವರಿಷ್ಠ ಪ್ರಭಾರಿ, ಯೋಗ ಗುರು ಭವರಲಾಲ ಆರ್ಯ ಕರೆ ನೀಡಿದ್ದಾರೆ.
ಪತಂಜಲಿ ಯೋಗಪೀಠದಿಂದ ‘ಬೇಡ ಮದ್ಯ ಪಾನ-ಮಾಡಿ ಯೋಗ ಧ್ಯಾನ’ ಧ್ಯೇಯ ವಾಕ್ಯದೊಂದಿಗೆ ವಿನೂತನವಾಗಿ ಹೊಸವರ್ಷವನ್ನು ಸ್ವಾಗತಿಸುತ್ತಿದ್ದೇವೆ. ಅಂದು ಬೆಳಗ್ಗೆ ಕರ್ನಾಟಕದ ಎಲ್ಲ ಜಿಲ್ಲಾ, ತಾಲೂಕು, ನಗರ ಮತ್ತು ಗ್ರಾಮ ಮಟ್ಟದಲ್ಲಿ ಉಚಿತವಾಗಿ ಯೋಗ, ಧ್ಯಾನ, ಪ್ರಾಣಾಯಾಮ, ಅಗ್ನಿಹೋತ್ರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.