

ಬಾಗಲಕೋಟೆ: ವಿಶ್ವದಲ್ಲಿ ಹಲವು ಧರ್ಮಗಳು ಉದಯವಾಗಿದ್ದರೂ ಸಹ ಯೋಗವು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಅದು ಜೀವನ ಪದ್ಧತಿಯಾಗಿದೆ ಎಂದು ಡಾ.ಸತೀಶ ಪಾಟೀಲ ಹೇಳಿದರು.
ನಗರದ ಎಂ.ಆರ್.ಎನ್ ಆಯುರ್ವೇದಿಕ್ ಮೆಡಿಕಲï ಕಾಲೇಜಿನಲ್ಲಿ ಮಂಗಳವಾರ ಸ್ವಾಸ್ತಯ ಏವಂ ಯೋಗ ವಿಭಾಗದಿಂದ ಹಮ್ಮಿಕೊಂಡಿದ್ದ ೧೦ನೇ ಅಂತರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಯೋಗಾನುಷ್ಠಾನ, ಅಂತರ ಕಾಲೇಜುಗಳ ಆನ್‌ಲೈನ್ ಪ್ರಬಂಧ ಸ್ಪರ್ಧೆ, ಯೋಗ ಕ್ವೆಸ್ಟ್ ರಸಪ್ರಶ್ನೆ ಸ್ಪರ್ಧೆಗಳ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಯೋಗದಿಂದ ಆರೋಗ್ಯಕ್ಕೆ ಸಾಕಷ್ಟು ಸಹಕಾರಿಯಾಗಿದೆ. ಯೋಗದಿಂದ ಹಲವು ಸಮಸ್ಯೆಗಳು ಇತ್ಯರ್ಥವಾಗುತ್ತವೆ. ನಾವುಗಳೆಲ್ಲರೂ ನಮ್ಮ ಆರೋಗ್ಯಕರ ಬದುಕಿಗೆ ಅದನ್ನು ಅಳವಡಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
ಸಂಸ್ಥೆಯ ಅಧ್ಯಕ್ಷೆ ಮಾಧುರಿ ಮುಧೋಳ ಮಾತನಾಡಿ, ಮಹಿಳೆಯರು ಹೆಚ್ಚಿನ ಆರೋಗ್ಯ ವೃದ್ಧಿಗಾಗಿ, ಹಲವು ಆರೋಗ್ಯಕರ ಸಮಸ್ಯೆಗಳ ಪರಿಹಾರಕ್ಕೆ ಯೋಗ ಅವಶ್ಯಕ ಎಂದರು.
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ನಗದು ಬಹುಮಾನ ಪಡೆದುಕೊಂಡರು. ಆಡತಾಽಕಾರಿ ಡಾ.ಶಿವಕುಮಾರ ಗಂಗಾಲ, ಕಾಲೇಜಿನ ಪ್ರಾಚಾರ್ಯ ಪ್ರಹ್ಲಾದ್ ಗಂಗಾವತಿ, ಡಾ.ವಿಜಯಕುಮಾರ ಸಿ, ಡಾ. ಈಶ್ವರ ಪಿ, ಡಾ. ದೀಪಾ ಜಿ, ಡಾ.ರಜನಿ ಡಿ, ಡಾ. ಅತಿರಾ ಎಸ್, ಡಾ. ಶಶಿಕಲಾ, ಡಾ.ವಿದ್ಯಾಶ್ರೀ, ಡಾ. ಮುತ್ತಣ್ಣ, ಡಾ. ಪ್ರಮೋದ, ಡಾ. ಅಶ್ವಿನಿ ಎಚ್, ಡಾ. ಅಂಜನಾ ಕೆ ಇದ್ದರು.