

ರಾಯಬಾಗ: ಹಲವಾರು ದೇಶಗಳು ಯೋಗವನ್ನು ಅಳವಡಿಸಿಕೊಂಡಿದ್ದು, ಅದರ ಶ್ರೇಯಸ್ಸು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕೆಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣದ ಲಕ್ಷ್ಮಿಸೇನ ಶಿಕ್ಷಣ ಸಂಸ್ಥೆಯ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ದಿನನಿತ್ಯ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಎಂದರು.
ಪಪಂ ಅಧ್ಯಕ್ಷ ಅಶೋಕ ಅಂಗಡಿ, ತಾಪಂ ಇಒ ಡಾ. ಸುರೇಶ ಕದ್ದು, ಬಿಇಒ ಬಸವರಾಜಪ್ಪ ಆರ್., ಬಿಜೆಪಿ ರಾಯಬಾಗ ಮಂಡಲ ಅಧ್ಯಕ್ಷ ಪೃಥ್ವಿರಾಜ ಜಾಧವ, ವಸಂತ ಹೊಸಮನಿ, ಸಂಜಯ ಕುಸ್ತಿಗಾರ, ಜಯಾನಂದ ಹಿರೇಮಠ, ಡಾ.ಅಜಿತ್ ನಾಯಿಕ, ಡಾ.ವಿನಾಯಕ ಕುಲಕರ್ಣಿ, ಸದಾನಂದ ಹಳಿಂಗಳಿ, ಬಸವರಾಜ ಡೋಣವಾಡೆ, ಮಹೇಶ ಕರಮಡಿ, ವಿ.ಬಿ.ಚಿಕಬಿರೆ ಇತರರಿದ್ದರು.