

ಕಲಬುರಗಿ: ಜ. ೨೧ ರಂದು ನಡೆಯುವ ೧೧ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಿದ್ದು, ಜಿಲ್ಲಾಮಟ್ಟದ ಅಧಿಕಾರಿಗಳು ಸಕಲ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿದರು.
ಬುಧವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿ, ಜಿಲ್ಲಾಡಳಿತ, ಜಿಲ್ಲಾ ಆಯುಷ್ ಇಲಾಖೆ, ಮಹಾವಿದ್ಯಾಲಯಗಳ ಪ್ರಾಂಶುಪಾಲರು ಮತ್ತು ವಿವಿಧ ಯೋಗ ಸಂಘಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಯೋಗ ದಿನ ಆಚರಿಸಲಾಗುವುದು. ನಗರದ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನರ‍್ಧರಿಸಲಾಯಿತು. ಬೆಳಗ್ಗೆ ೭ಕ್ಕೆ ಯೋಗ ಅರಂಭವಾಗಲಿದೆ. ೭.೪೫ರವರೆಗೆ ವೇದಿಕೆ ಕರ‍್ಯಕ್ರಮ ಜರುಗಲಿದೆ ಎಂದರು.
"ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ' ಘೋಷವಾಕ್ಯದೊಂದಿಗೆ ಆಚರಿಸುತ್ತಿದ್ದು, ವಿದ್ಯರ‍್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದರು. ಮಕ್ಕಳನ್ನು ಕರೆತರಲು ವಾಹನ ವ್ಯವಸ್ಥೆ ಮಾಡಬೇಕು. ಲು ಉಪಹಾರ, ನೀರಿನ ವ್ಯವಸ್ಥೆ, ಯೋಗ ಮ್ಯಾಟ್ ವ್ಯವಸ್ಥೆ ಮಾಡಬೇಕು ಎಂದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಎಸ್ಪಿ ಅಡ್ಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ, ಶಾಲಾ ಶಿಕ್ಷಣ ಇಲಾಖೆ ಉಪನರ‍್ದೇಶಕ ಸರ‍್ಯಕಾಂತ ಮದಾನೆ, ಪದವಿ ಪರ‍್ವ ಶಾಲಾ ಶಿಕ್ಷಣ ಇಲಾಖೆ ಉಪನರ‍್ದೇಶಕ ಸೂರೇಶ ಅಕ್ಕಣ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನರ‍್ದೇಶಕ ಅಮೃತ ಅಷ್ಟಗಿ, ಡಿಯುಡಿಸಿ ಯೋಜನಾ ನರ‍್ದೇಶಕ ಮುನ್ನಾವರ್ ದೌಲಾ, ಡಿಎಚ್ಒ ಡಾ.ಶರಣಪ್ಪ ಕ್ಯಾತನಾಳ, ಜಾವೀದ್ ಕರಂಗಿ, ಡಾ.ಕೆ.ಬಿ.ಬಬಲಾದಿ ಇತರರಿದ್ದರು.