

ಚಿತ್ರದುರ್ಗ: ಪ್ರಸ್ತುತ ದಿನಮಾನಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವುದು ಸವಾಲಾಗಿದೆ ಎಂದು ರಂಗ ನಿರ್ದೇಶಕ ಕೆಪಿಎಂ ಗಣೇಶಯ್ಯ ಹೇಳಿದರು.
ನಗರದ ಚಿನ್ಮಯ ಮಯೂರ ಯೋಗ ಕ್ರೀಡಾ, ಸಾಂಸ್ಕೃತಿಕ ಸಂಸ್ಥೆ ಶುಕ್ರವಾರ ವಿಹಿಂಪ ಕಾರ್ಯಾಲಯದಲ್ಲಿ ಏರ್ಪಡಿಸಿದ್ದ ಎಂ.ಬಿ. ಮುರುಳಿ ಸಾರಥ್ಯದ ಯೋಗ ಚಿಕಿತ್ಸಕ ತರಬೇತಿ ತರಗತಿಗೆ ಚಾಲನೆ ನೀಡಿ ಮಾತನಾಡಿ, ದಿವ್ಯ ಔಷಧವಾಗಿರುವ ಯೋಗವನ್ನು ಎಲ್ಲರಿಗೂ ಪರಿಚಯಿಸುವ ಕೆಲಸವಾಗಬೇಕಿದೆ ಎಂದರು.
ಸರ್ಕಾರಿ ಪಾಲಿಟೆಕ್ನಿಕ್ ಉಪನ್ಯಾಸಕ ಜ.ರಾ. ನಾಗೇಶ್ ಮಾತನಾಡಿ ಯೋಗ ಶಿಸ್ತು, ಏಕಾಗ್ರತೆ ಮತ್ತು ಜೀವನ ಬದ್ಧತೆ ಕಲಿಸುತ್ತದೆ ಎಂದರು. ಚಳ್ಳಕೆರೆ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆರ್.ಎಸ್. ಉಮೇಶ್ ಮಾತನಾಡಿದರು. ಎಸ್.ಕೆ. ಸುನೀತಾ, ಮಾನಸ ಸಂತೋಷ್, ಮನೋಹರ್ ಮತ್ತಿತರರು ಇದ್ದರು.