

ಕಲಬುರಗಿ: ಯೋಗಿಗಳಿಗೆ ನಿರೋಗಿಯಾಗಿದ್ದು, ಭೋಗಿಗಳಿಗೆ ರೋಗ ನಿಶ್ಚಿತ. ಆದ್ದರಿಂದ ಸರಳ ಯೋಗವನ್ನು ರೂಢಿಸಿಕೊಂಡು ಆರೋಗ್ಯದಿಂದ ಇರಬೇಕು ಎಂದು ಪ್ರಾಚಾರ್ಯ ಡಾ.ಆರ್.ಕೃಷ್ಣಮೂರ್ತಿ ಹೇಳಿದರು.
ನಗರದ ಚಂದ್ರಕಾAತ ಪಾಟೀಲ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡ ವಿಶ್ವ ಯೋಗ ದಿನಾಚರಣೆಯಲ್ಲಿ ಮಾತನಾಡಿ, ಕ್ರಿ.ಪೂ.೨ನೇ ಶತಮಾನದಿಂದಲೇ ಜಾರಿಯಲ್ಲಿರುವ ಯೋಗ ಪರಂಪರೆ ಇಂದಿಗೂ ಇದೆ. ಯೋಗ ಶರೀರದಲ್ಲಿನ ವಿಶಿಷ್ಠ ಶಕ್ತಿಯನ್ನು ಜಾಗೃತಗೊಳಿಸಿ, ಮನಸ್ಸಿನ ಚಂಚಲತೆ ಶಮನಗೊಳಿಸುತ್ತದೆ ಎಂದರು.
ಯಮ, ನಿಯಮ, ಆಸನ, ಪ್ರಾಣಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಹಾಗೂ ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ, ರಾಜಯೋಗ, ಪತಂಲಿ ಯೋಗಗಳನ್ನು ಕ್ರಮಬದ್ಧವಾಗಿ ಅನುಸರಿಸಬೇಕು ಎಂದರು.
ಭೂಮಿ ಯೋಗ ಫೌಂಡೇಷನ್ ಟ್ರಸ್ಟ್ನ ಹಾಗೂ ಕಡಗಂಚಿ ಕೇಂದ್ರಿಯ ವಿವಿ ಯೋಗ ಉಪನ್ಯಾಸಕ ನಾಗರಾಜ ಸಾಲೋಳ್ಳಿ ಯೋಗಾಭ್ಯಾಸ ಮಾಡಿಸಿದರು. ಉಪನ್ಯಾಸಕರಾದ ಶಿವಾನಂದ ಪಾಟೀಲ್, ಪಂಚನಾಥ ಪಾಟೀಲ್, ಶ್ರವಣ ಪಾಟೀಲ್, ಶಶಿಭೂಷಣ ಹಿರೇಮಠ, ರಾಜಲಕ್ಷಿö್ಮÃ, ರೇಣುಕಾ, ಸೌಮ್ಯಶ್ರೀ, ಗೀತಾ, ಶಿವರಾಜ, ಸತೀಶ, ಶಂಕ್ರಯ್ಯ ಸ್ವಾಮಿ ಇತರರಿದ್ದರು.