ಯೋಧರ ಸ್ಮರಣೆ ಜವಾಬ್ದಾರಿ

26KDR2 web
Published on

ಕಡೂರು:ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಜವಬ್ದಾರಿ ಎಂದು ಪ್ರಜ್ಞಾ ಶಾಲೆ ಕಾರ್ಯದರ್ಶಿ ಎನ್.ಪಿ. ಮಂಜುನಾಥ ಪ್ರಸನ್ನ ತಿಳಿಸಿದರು. ಪ್ರಜ್ಞಾ ಶಾಲೆಯಲ್ಲಿ ಮಂಗಳವಾರ ಕಾರ್ಗಿಲ್ ವಿಜಯ್ ದಿವಸ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಜೀವದ ಹಂಗು ತೊರೆದು ದೇಶಕ್ಕಾಗಿ ಸೇವೆ ಸಲ್ಲಿಸಿದ ಯೋಧರು ಸ್ಮರಣೀಯರು ಎಂದರು. ಶಾಲೆಯ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಮೇಣದ ಬತ್ತಿ ಬೆಳಗಿ ಕಾರ್ಗಿಲ್ ಹುತಾತ್ಮ ಯೋಧರಿಗೆ ಶ್ರದ್ಧಾಂಜ ಸಲ್ಲಿಸಿದರು. ಶಾಲೆಯ ಪ್ರಾಚಾರ್ಯ ಕ್ಲಾರಾಡಿಮೆಲೊ, ಉಪಪ್ರಾಚಾರ್ಯ ಎನ್.ಎಂ.ಸೌಮ್ಯಾ, ಶಿಕ್ಷಕರಾದ ತುಳಸಿ, ಚೈತ್ರಾ, ಜಿ.ಬಿ.ಮೂರ್ತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net