ಯೇಸು ಕ್ರಿಸ್ತರ ಜನ್ಮ ದಿನಾಚರಣೆ

ಯೇಸು ಕ್ರಿಸ್ತರ ಜನ್ಮ ದಿನಾಚರಣೆ
Published on

ಹೊಳೆನರಸೀಪುರ: ಪಟ್ಟಣದ ಮಹಾತ್ಮ ಗಾಂಧೀಜಿ ಉದ್ಯಾನವನದಲ್ಲಿ ವಿಶ್ವಕ್ಕೆ ಶಾಂತಿ ಸಹ ಬಾಳ್ವೆ ಸೌಹಾರ್ದತೆಯನ್ನು ಸಾರಿದ ಯೇಸು, ಕ್ರಿಸ್ತರ ಜನ್ಮ ದಿನಾಚರಣೆ ಪ್ರಯುಕ್ತ ಶ್ರೀವಾಸವಿ, ವಿದ್ಯಾ ಸಂಸ್ಥೆಯ ಚಿಣ್ಣರನ್ನು ಕರೆ ದೋಯ್ದು ಸಡಗರ ಸಂಭ್ರಮದಿಂದ ಕ್ರಿಸ್ಮಸ್ ಸಂಭ್ರಮಾಚರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ, ಎರಡನೇ ತರಗತಿಯ ವಿದ್ಯಾರ್ಥಿ, ವಿಜಯ ರಾಜ್ ಹುಟ್ಟುಹಬ್ಬವನ್ನು ಸಹ ಕೇಕ್ ಕತ್ತರಿಸುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. ಬಳಿಕ ಉದ್ಯಾನವನದಲ್ಲಿಯೇ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿ ಮಕ್ಕಳು ಜಿಂಗಲ್ ಬೆಲ್ಸ್ ಹಾಡಿಗೆ ನೃತ್ಯ ಪ್ರದರ್ಶನ ಮಾಡಿ ಕುಣಿದು ಕುಪ್ಪಳಿಸಿದರು. ಮಕ್ಕಳೊಂದಿಗೆ ಶಿಕ್ಷಕ ಶಿಕ್ಷಕಿಯರು ಸಹ ನೃತ್ಯ ಮಾಡಿ ಮಕ್ಕಳನ್ನು ಮನರಂಜಿಸಿದರು. ವಿವಿಧತೆಯಲ್ಲಿ ಏಕತೆ ಎಂಬ ಸಂದೇಶ ಸಾರುವ ನಮ್ಮ ದೇಶದ ಭಾವೈಕ್ಯತೆಯನ್ನು ಇದೇ ಸಂದರ್ಭದಲ್ಲಿ ಅರಿವು ಮೂಡಿಸಲಾಯಿತು. ಮಕ್ಕಳು ಶಿಕ್ಷಕರು ಕೆಂಪು ವಸ್ತ್ರ, ಕ್ರಿಸ್ಮಸ್ ಟೋಪಿ ಧರಿಸಿದರು ಕೆಲವು ಮಕ್ಕಳು ಸಂತ ಮೇರಿ ಅವರ ಉಡುಗೆ ತೊಡೆಗೆ ಧರಿಸಿ ಉದ್ಯಾನವನದಲ್ಲಿದ್ದ ಸಾರ್ವಜನಿಕರಿಗೆ ಮನಸೆಳೆದರು. ಅಲ್ಲೇ ನೆರದಿದ್ದ ಶಾಲಾ-ಕಾಲೇಜು ಮಕ್ಕಳು ಸಾರ್ವಜನಿಕರು ಮಕ್ಕಳೊಂದಿಗೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದಿದ್ದ ವಿಶೇಷ.

ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ನಿರ್ಮಲ ಎಸ್ ಕೆ ,ಕೋಮಲ ಕೆ ಆರ್, ಶೋಭಾ ಎಎಲ್, ಚಂದ್ರಶೇಖರ್ ,ಸುಮಾ ಜೆ ಎಚ್ ,ಪಾರ್ವತಿ ,ಅನ್ನ ಪೂರ್ಣೇಶ್ವರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net