

ಕಾನಹೊಸಹಳ್ಳಿ: ಚಿಕ್ಕಜೋಗಿಹಳ್ಳಿಯಲ್ಲಿ ರೈತರು ಮಂಗಳವಾರ ಯೂರಿಯಾ ಗೊಬ್ಬರಕ್ಕಾಗಿ ಮುಗಿಬಿದ್ದಿದ್ದರು. ಕೆಲ ರೈತರು ಗೊಬ್ಬರ ಸಿಗದೆ ನಿರಾಸೆಯಿಂದ ಮನೆಗೆ ತೆರಳಿದರು.
ರೈತ ಉತ್ಪಾದಕರ ಸಂಘದ ಅಂಗಡಿಗೆ ಮಂಗಳವಾರ 150 ಚೀಲ ಯೂರಿಯಾ ಗೊಬ್ಬರ ಬಂದಿತ್ತು. ರೈತರಿಗೆ ತಲಾ ಎರಡು ಚೀಲದಂತೆ ವಿತರಿಸಲಾಯಿತು. ಸಂಘದವರು ಗೊಬ್ಬರವನ್ನು ಬೇಕಾದವರಿಗೆ ವಿತರಿಸಿದರೆಂದು ಕೆಲ ರೈತರು ಅಂಗಡಿ ಹೊರಗೆ ಅಸಮಾಧಾನ ವ್ಯಕ್ತ ಪಡಿಸಿದರು.