

ಬೆಂಗಳೂರು: ಶೈಕ್ಷಣಿಕ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡಿರುವ ವಿದ್ಯಾವಾಹಿನಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ಹಾಗೂ ಶಿಕ್ಷಣ ಕ್ಷೇತ್ರದ ಯೂತ್ ಐಕಾನ್ ಎನ್.ಬಿ.ಪ್ರದೀಪ್ ಕುಮಾರ್ ಅವರಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ-2022’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ನಾಡಿನ 42 ಸಾಧಕರಿಗೆ ವಿಜಯರತ್ನ-2022 ಪ್ರಶಸ್ತಿ ಪ್ರದಾನ ಮಾಡಲಾಯಿತು.
ತುಮಕೂರಿನ ಶೈಕ್ಷಣಿಕ ವಲಯದಲ್ಲಿ ಪ್ರಧಾನ ಭೂಮಿಕೆಯಲ್ಲಿ ಕೇಳಿ ಬರುವ ಹೆಸರು ಎನ್.ಬಿ.ಪ್ರದೀಪ್ ಕುಮಾರ್. ಸಾಮಾಜಿಕ ಕಾರ್ಯಕರ್ತರಾಗಿ, ಬ್ಯಾಂಕಿಂಗ್, ಐಟಿ ಕ್ಷೇತ್ರದಲ್ಲಿ ಸಮಾಲೋಚಕರಾಗಿಯೂ ತೊಡಗಿಸಿಕೊಂಡಿರುವ ಪ್ರದೀಪ್ ಕುಮಾರ್ ಸಾಧನೆ ಯುವಪೀಳಿಗೆಗೆ ಮಾದರಿಯಾಗಿದೆ. ವಿದ್ಯಾವಾಹಿನಿ ಸಮೂಹ ಸಂಸ್ಥೆಯ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ವಿದ್ಯಾ ಸಂಸ್ಥೆಗಳಿಗೆ ಹೊಸ ಮೆರುಗು ನೀಡಿ, ತಂತ್ರಜ್ಞಾನದ ಸಮರ್ಪಕ ಬಳಕೆ ಮೂಲಕ ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿಗೆ ನೆರವೀಯುತ್ತಿದ್ದಾರೆ. ಸಂಸ್ಥೆ, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವ ವ್ಯಕ್ತಿತ್ವ ಪ್ರದೀಪ್ ಕುಮಾರ್ ಅವರದ್ದು. 13 ವರ್ಷ ಐಟಿ ಸಂಸ್ಥೆಯಲ್ಲಿ ಯುಕೆ, ದುಬೈ, ಆಸ್ಟ್ರೇಲಿಯಾದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆ ನಂತರ ಶಿಕ್ಷಣ ಕ್ಷೇತ್ರದ ಕಡೆ ಮುಖ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳಿಗೆ ಮುಂದಡಿ ಇಟ್ಟಿದ್ದಾರೆ.
1100 ಮಂದಿಗೆ ಐಟಿ ಕಂಪನಿಯಲ್ಲಿ ಉದ್ಯೋಗ: ಇವರ ವಿದ್ಯಾ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿರುವ ಹಲವು ವಿದ್ಯಾರ್ಥಿಗಳು ವಿವಿಧ ಐಟಿ ಕಂಪನಿಗಳಲ್ಲಿ ಉದ್ಯೋಗದಲ್ಲಿದ್ದಾರೆ. ಕಳೆದ 13 ವರ್ಷದಲ್ಲಿ 1100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉದ್ಯೋಗ ಪಡೆದುಕೊಂಡಿದ್ದಾರೆ. ಸೈನ್ಸ್ ಮತ್ತು ಕಾಮರ್ಸ್ ವಿಭಾಗದಲ್ಲಿ ಈ ಸಂಸ್ಥೆಯ ವಿದ್ಯಾರ್ಥಿಗಳು ಕಳೆದ 3 ವರ್ಷಗಳಿಂದ ರಾಜ್ಯಮಟ್ಟದ ರ್ಯಾಂಕ್ಗಳನ್ನು ಪಡೆದುಕೊಂಡು ಬರುತ್ತಿದ್ದಾರೆ. 1980ರಲ್ಲಿ ಈ ಸಂಸ್ಥೆ ಆರಂಭವಾಗಿದೆ. 2010ರಲ್ಲಿ ಪ್ರದೀಪ್ ಕುಮಾರ್ ಸಂಸ್ಥೆಯ ಜವಾಬ್ದಾರಿ ವಹಿಸಿಕೊಂಡಾಗ ಸಾವಿರ ವಿದ್ಯಾರ್ಥಿಗಳು ಇದ್ದರು. ಇಂದು 6 ಸಾವಿರ ವಿದ್ಯಾರ್ಥಿಗಳಿದ್ದು, 400ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶೈಕ್ಷಣಿಕ ಕ್ಷೇತ್ರಕ್ಕೆ ಪ್ರದೀಪ್ ಕೊಡುಗೆ: ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳಿಗೆ ಸೇರಿದ ಎರಡು ಪದವಿ ಪೂರ್ವ ಕಾಲೇಜು, ಒಂದು ಪದವಿ ಕಾಲೇಜು, ಒಂದು ಶಾಲೆ ಹಾಗೂ ಒಂದು ಐಟಿಐ ಕಾಲೇಜು ತುಮಕೂರಿನಲ್ಲಿದೆ. 2010ರಲ್ಲಿ ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಯಾದ ಬಳಿಕ ಸಂಸ್ಥೆಯಲ್ಲಿ ಅನೇಕ ಮಹತ್ತರ ಬದಲಾವಣೆಗಳನ್ನು ಮಾಡುವ ಮೂಲಕ ನಾಡಿನ ವಿದ್ಯಾರ್ಥಿವೃಂದಕ್ಕೆ ಸಾಕಷ್ಟು ಹೊಸ ಅವಕಾಶಗಳನ್ನು ಕಲ್ಪಿಸಿಕೊಡುತ್ತಾ ಬಂದಿದ್ದಾರೆ. ಆಡಳಿತಾತ್ಮಕವಾಗಿ ಪಾರದರ್ಶಕತೆ ಕಾಪಾಡಿಕೊಂಡು ಬಂದಿರುವ ಇವರು, ವಿಪ್ರೋ, ಇನ್ಪೋಸಿಸ್, ಟಿಸಿಎಸ್ ಮೊದಲಾದ ಪ್ರತಿಷ್ಠಿತ ಕಂಪನಿಗಳಲ್ಲಿ ಕ್ಯಾಂಪಸ್ ಸಂದರ್ಶನದ ಮೂಲಕವೇ ಅಭ್ಯರ್ಥಿಗಳು ಬಿಸಿಎ, ಬಿಕಾಂ ಮಾಡಿದವರಿಗೂ ಒದಗುವಂತೆ ಮಾಡಿದ್ದಾರೆ. ಕೇವಲ ತಮ್ಮ ಸಂಸ್ಥೆಯಲ್ಲಿ ಕಲಿತವರಿಗೆ ಮಾತ್ರವೇ ಅವಕಾಶ ಎಂಬ ಧೋರಣೆ ಹೊಂದದೇ, ಇತರ ಕಾಲೇಜುಗಳ ವಿದ್ಯಾರ್ಥಿಗಳಿಗೂ ಈ ಸಂದರ್ಶನದಲ್ಲಿ ಭಾಗವಹಿಸುವಂತೆ ವ್ಯವಸ್ಥೆ ರೂಪಿಸುವುದು ಇವರ ಹೃದಯ ವೈಶಾಲ್ಯವನ್ನು ಎತ್ತಿತೋರುತ್ತದೆ.
ಪ್ರದೀಪ್ ಸಾಮಾಜಿಕ ಕಾರ್ಯಗಳು: ರೌಂಡ್ ಟೇಬಲ್ ಹೆಸರಿನ ಸಂಸ್ಥೆಯ ಮೂಲಕ ತುಮಕೂರು ಸಿಟಿಯಲ್ಲಿ 8 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ರಾಷ್ಟ್ರೀಯ ಹಾಗೂ ನಾಡಹಬ್ಬಗಳ ಸಂದರ್ಭದಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದ ಹಿರಿಯರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡುತ್ತಾರೆ. ಕ್ರೀಡೆಗೆ ಪ್ರೋತ್ಸಾಹ ನೀಡುವ ಸಲುವಾಗಿ ಅನೇಕ ಪಂದ್ಯಗಳನ್ನು ಆಯೋಜಿಸಿದ್ದಾರೆ. ವಾರ್ಷಿಕ ಪರೀಕ್ಷೆಗಳಲ್ಲಿ ಅತ್ಯುನ್ನತ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಜತೆಗೆ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಪ್ರಗತಿಗಾಗಿ ಲ್ಯಾಪ್ಟಾಪ್, ಪುಸ್ತಕಗಳನ್ನು ವಿತರಿಸುತ್ತಾರೆ. ಕರೊನಾ ಸಂದರ್ಭದಲ್ಲಿ ಹಲವು ಬಡ ಕುಟುಂಬಗಳಿಗೆ ಆಹಾರ ಮತ್ತು ಆರೋಗ್ಯದ ಕಿಟ್ಗಳನ್ನು ಒದಗಿಸಿಕೊಟ್ಟಿದ್ದಾರೆ.
ತುಮಕೂರು ಸಿಂಡಿಕೇಟ್ ಸದಸ್ಯ: ಶಿಕ್ಷಣ ಕ್ಷೇತ್ರದಲ್ಲಿ ಹಲವು ಕ್ರಾಂತಿಕಾರಕ ಸುಧಾರಣೆ ತಂದಿರುವ ಪ್ರದೀಪ್ ಅವರ ಸೇವೆಯನ್ನು ಗುರುತಿಸಿ 2015ರಲ್ಲಿ ಅಂದಿನ ರಾಜ್ಯಪಾಲರು ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದರು. ವಿವಿ ಮಟ್ಟದಲ್ಲಿ ಶೈಕ್ಷಣಿಕ ಸುಧಾರಣೆಗಾಗಿ ಹಲವು ಸಲಹೆ, ಸೂಚನೆಗಳನ್ನು ಇವರು ನೀಡಿದ್ದಾರೆ.
ವೃತ್ತಿಪರ ಕೌಶಲ್ಯಗಳ ತರಬೇತಿ: ವಿ-ಟೆಕ್ ಸೊಲ್ಯೂಷನ್ಸ್ ಜತೆಗೆ ವಿದ್ಯಾವಾಹಿನಿ ಸಂಸ್ಥೆಯು ಸಹಯೋಗ ಹೊಂದಿದ್ದು, ಹಲವು ರೀತಿಯ ತರಬೇತಿಗಳನ್ನು ತುಮಕೂರಿನ ವಿದ್ಯಾರ್ಥಿಗಳಿಗೆ ಒದಗಿಸಿಕೊಡಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯ ರೂಪಿಸಿ ಯಶಸ್ಸು ಕಂಡವರು ಪ್ರದೀಪ್ ಕುಮಾರ್. ವಿದ್ಯಾರ್ಥಿಗಳ ಕೌಶಲ್ಯವರ್ಧನೆಗಾಗಿ ಅನೇಕ ಕಡಿಮೆ ಅವಧಿಯ ಪೂರಕ ಕೋರ್ಸ್ ಗಳನ್ನು ಪ್ರಾರಂಭಿಸಿದ್ದು, ಅದರಲ್ಲಿ ಕಂಪ್ಯೂಟರ್ ಬೇಸಿಕ್ಸ್, ಕಂಪ್ಯೂಟರ್ ಹಾರ್ಡ್ವೇರ್, ಸ್ಪೋಕನ್ ಇಂಗ್ಲಿಷ್ ಅಲ್ಲದೇ ಇನ್ನಿತರ ವೃತ್ತಿಕೌಶಲ್ಯಗಳ ತರಬೇತಿ ಕೂಡಾ ಸೇರಿವೆ. ತುಮಕೂರಿನ ಗ್ರಾಮಾಂತರ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಇಲ್ಲಿಯವರೆಗೆ ಹೆಚಿ ್ಚ ವಿದ್ಯಾರ್ಥಿಗಳು ಈ ಮೂಲಕ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ.
ಐಡಿಪಿ ಎಜುಕೇಷನ್: ವಿದೇಶಗಳಲ್ಲಿ ಅಧ್ಯಯನ ನಡೆಸಬೇಕೆಂಬ ಅಪೇಕ್ಷೆ ಹೊಂದಿರುವ ವಿದ್ಯಾರ್ಥಿಗಳಿಗಾಗಿ ಸೂಕ್ತ ತರಬೇತಿ ಒದಗಿಸಿಕೊಡುವ ನಿಟ್ಟಿನಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆ ಐಡಿಪಿ ಎಜುಕೇಷನ್ ಜತೆಗೆ ಸಹಯೋಗ ಪಡೆದುಕೊಳ್ಳುವ ಮೂಲಕ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುತ್ತಿದ್ದಾರೆ. ಪದವಿ ಪೂರ್ವ ಹಂತದಿಂದಲೇ ಇಂತಹ ವಿದ್ಯಾರ್ಥಿಗಳಿಗೆ ಪೂರಕ ತರಬೇತಿ ಕೊಡುವುದು ಮಾತ್ರವಲ್ಲದೇ, ಅವರಿಗೆ ಹೊರದೇಶದಲ್ಲಿ ಶಿಕ್ಷಣ ಪಡೆಯಲು ಬೇಕಾದ ಎಲ್ಲ ವ್ಯವಸ್ಥೆ ಮಾಡಿಕೊಡುತ್ತದೆ.
ನಮ್ಮ ವಿದ್ಯಾ ಸಂಸ್ಥೆಗಳನ್ನು ರಾಜಕೀಯ, ಧಾರ್ವಿುಕತೆಯಿಂದ ದೂರವಿಟ್ಟು, ದೇಶ ಕಟ್ಟುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಮಾನತೆ ತರಲು ಸಾಧ್ಯವಾಗುತ್ತದೆ. ಪ್ರತಿಷ್ಠಿತ ವಿಜಯರತ್ನ ಪ್ರಶಸ್ತಿ ಸ್ವೀಕರಿಸಿರುವುದು ಸಂತೋಷ ನೀಡಿದೆ. ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿನ ಪ್ರತಿಯೊಬ್ಬರು ಸಾಕಷ್ಟು ಶ್ರಮವಹಿಸಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಿದ್ದಾರೆ.
| ಎನ್.ಬಿ.ಪ್ರದೀಪ್ ಕುಮಾರ್ ವಿದ್ಯಾವಾಹಿನಿ ಸಮೂಹ ಸಂಸ್ಥೆಯ ಕಾರ್ಯದರ್ಶಿ