ಯೂಟ್ಯೂಬ್ ಲಿಂಕ್‌ ಕಳುಹಿಸಿ ವೈದ್ಯನಿಂದ 29.71 ಲಕ್ಷ ರೂ. ದೋಚಿದರು!

cybe crime
Published on

ಮೈಸೂರು: ಯೂಟ್ಯೂಬ್‌ನಲ್ಲಿ ಬಂದ ಲಿಂಕ್ ಕ್ಲಿಕ್ ಮಾಡಿ ಹಣ ಹೂಡಿದ ವೈದ್ಯರೊಬ್ಬರು 29.71 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಶ್ರೀರಾಂಪುರ ನಿವಾಸಿ ಹಣ ಕಳೆದುಕೊಂಡಿದ್ದಾರೆ. ಯೂಟ್ಯೂಬ್ ವೀಕ್ಷಿಸುತ್ತಿದ್ದ ವೇಳೆ ಲಿಂಕ್‌ವೊಂದು ಬಂದಿದೆ. ಇದನ್ನು ಓಪನ್ ಮಾಡಿದಾಗ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛೆ ಇದೆಯೇ ಎಂದು ಕೇಳಲಾಗಿದೆ.

ಇದಕ್ಕೆ ವೈದ್ಯರು, ಒಪ್ಪಿಕೊಂಡು ಕೆವೈಸಿ ಅಪ್‌ಡೇಟ್ ಮಾಡಿಕೊಟ್ಟಿದ್ದಾರೆ.

ನಂತರ ಹಣ ಹೂಡಿಕೆ ಮಾಡುವಂತೆಯೂ ಸಲಹೆ ನೀಡಲಾಗಿದೆ. ಇದನ್ನು ಪಾಲನೆ ಮಾಡಿದ ವೈದ್ಯರು ಹಂತ ಹಂತವಾಗಿ 29,71,442 ರೂ. ಆನ್‌ಲೈನ್ ಮೂಲಕವೇ ವರ್ಗಾವಣೆ ಮಾಡಿದ್ದಾರೆ.

ಹಣ ವಾಪಸ್ ಬಾರದೆ ಇದ್ದಾಗ ಮೋಸ ಹೋಗಿರುವುದು ಗೊತ್ತಾಗಿದೆ. ಇವರು ನೀಡಿದ ದೂರಿನ ಅನ್ವಯ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net