ಯುವಶಕ್ತಿ ಭಾರತ ದೇಶದ ಆಸ್ತಿ

ಯುವಶಕ್ತಿ ಭಾರತ ದೇಶದ ಆಸ್ತಿ
Published on


ಚನ್ನರಾಯಪಟ್ಟಣ: ಪ್ರತಿಯೊಬ್ಬ ಯುವಶಕ್ತಿಯು ವಿವೇಕಾನಂದರ ತತ್ವ ಹಾಗೂ ಆದರ್ಶಗಳನ್ನು ಅಳವಡಿಸಿಕೊಂಡು ಸುಭದ್ರವಾದ ದೇಶ ಕಟ್ಟಲು ಕೈಜೋಡಿಸಬೇಕು ಎಂದು ಚನ್ನರಾಯಪಟ್ಟಣ ನಗರ ಠಾಣೆಯ ಪಿಎಸ್‌ಐ ಸುಪ್ರಿತ್ ಹೇಳಿದರು.


ಪಟ್ಟಣದಲ್ಲಿ ಶ್ರೀ ವಿವೇಕಾನಂದ ಇಂಟರ್ ನ್ಯಾಷನಲ್ ಶಾಲೆಯ ವತಿಯಿಂದ ಶ್ರೀ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.


ಯುವ ಸಮುದಾಯವು ವಿವೇಕಾನಂದರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಜೀವನ ನಡೆಸಬೇಕು. ಯುವ ಸಮುದಾಯ ದೇಶದ ಆಸ್ತಿ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳ ದಾಸದರಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಭಾರತವು ವಿಶ್ವದಲ್ಲಿಯೇ ಆರೋಗ್ಯ ಯುತವಾದ ಅತಿಹೆಚ್ಚು ಯುವಶಕ್ತಿ ಹೊಂದಿದ್ದು ಜಗತ್ತನ್ನೇ ತನ್ನತ್ತ ಆಕರ್ಷಿಸುತ್ತಿದೆ. ವಿವೇಕಾನಂದರು ಅಂದು ಹಾಕಿಕೊಟ್ಟ ದಾರಿಯಲ್ಲಿ ನಡೆಯುತಿದ್ದೇವೆ. ಅವರು ಕಟ್ಟಿದ ಸುಭದ್ರ ದೇಶವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಶ್ರೀ ವಿವೇಕಾನಂದ ಇಂಟರ‌್ದ ನ್ಯಾಷನಲ್ ಶಾಲೆಯ ಆವರಣದಿಂದ ಪ್ರಾರಂಭಗೊಂಡ ಜಾಥಾ ಮೈಸೂರು ರಸ್ತೆ. ಕೆಆರ್ ವೃತ್ತ, ನವೋದಯ ವೃತ್ತ, ಆಸ್ಪತ್ರೆ ರಸ್ತೆ ಮಾರ್ಗವಾಗಿ ಸಾಗಿ ಶಾಲೆಯ ಆವರಣಕ್ಕೆ ಆಗಮಿಸಿತು.


ಶ್ರೀ ವಿವೇಕಾನಂದ ಶಾಲೆಯ ಶಿಕ್ಷಕರಾದ ಚೇತನ್, ರಾಘವೇಂದ್ರ, ರವಿ, ಸಚಿನ್, ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net