

ಚಿಕ್ಕಮಗಳೂರು: ಆಧುನಿಕ ಜಗತ್ತಿನಲ್ಲಿ ದಾಸ ಸಾಹಿತ್ಯದ ಸೊಗಡನ್ನು ಪರಿಚಯಿಸಲು ಹಾಗೂ ಯುವಪೀಳಿಗೆಗೆ ಸಾಹಿತ್ಯಾತ್ಮಕವಾದ ಅಮೂಲ್ಯ ಜ್ಞಾನವನ್ನು ತುಂಬಲು ದಾಸಶ್ರೇಷ್ಟರ ವಿಚಾರಧಾರೆ ಆಳವಾಗಿ ಬಿತ್ತಬೇಕು ಎಂದು ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.
ನಗರದ ಹಿರೇಮಗಳೂರು ಸಮೀಪ ಶ್ರೀದೇವಿ ಭವನದಲ್ಲಿ ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ನೂತನ ಘಟಕದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ದಾಸ ಸಾಹಿತ್ಯ ಪಸರಿಸಲು ತಾಲೂಕು, ಹೋಬಳಿ ಮಟ್ಟದಲ್ಲಿ ಘಟಕವನ್ನು ಸ್ಥಾಪಿಸಲಾಗಿದೆ. ಕನಕದಾಸರು, ಪುರಂದರದಾಸರು ಸೇರಿದಂತೆ ಪ್ರಖ್ಯಾತ ದಿಗ್ಗಜರುಗಳ ವಚನ, ಕೀರ್ತನೆಗಳ ಸಾರಾಂಶವನ್ನು ಸಮಗ್ರವಾಗಿ ತೆರೆದಿಡಬೇಕು. ಜೊತೆಗೆ ಗ್ರಾಮೀಣ ಸೊಗಡಿನ ಬರಹಗಾರರನ್ನು ಗುರುತಿಸಿ ಸಾಹಿತ್ಯ ಲೋಕಕ್ಕೆ ಕರೆತರಬೇಕು ಎಂದರು.
ಅಸ್ಪÊಷ್ಯತೆ, ಮೇಲು-ಕೀಲು ಎಂಬ ಕೆಟ್ಟ ಸಂಪ್ರದಾಯ ತೊಡೆದು ಹಾಕುವ ಸಲುವಾಗಿ ಅನಾದಿ ಕಾಲದಲ್ಲೇ ದಾಸಶ್ರೇಷ್ಟರು ವಚನಗಳ ಮೂಲಕ ತಮ್ಮದೇ ಶೈಲಿಯಲ್ಲಿ ಇರುವೊಂದೇ ಮನುಷ್ಯ ಜಾತಿ ಎಂದು ಸಾರಿದ ಪರಿಣಾಮ ಇಂದು ಸರ್ವಜನರು ಒಂದೇ ಎಂಬ ಮನೋಭಾವನೆ ಸಮಾಜದಲ್ಲಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ನಾಗರಾಜ್ ರಾಜ್ ಕಲ್ಕಟ್ಟೆ, ದಾರ್ಶನಿಕರ ಕಾಲದಲ್ಲಿ ತಾರತಮ್ಯ ನೀತಿಗಳನ್ನು ಬೇರುಸಮೇತ ಕಿತ್ತೊಗೆಯಲು ದಾಸಶ್ರೇಷ್ಟರು ಪದಗಳ ಸಾಲಿನಲ್ಲಿ ಕೀರ್ತನೆಗಳನ್ನು ರಚಿಸಿ ಕೊಳಕು ಸಂಪ್ರದಾಯ ಹೋಗಲಾಡಿಸಿ ಸಮಾಜದ ಸುಧಾರಣೆಗೆ ಮುಂದಾಗಿದ್ದರು ಎಂದರು.
ದಾಸ ಸಾಹಿತ್ಯ ಕ್ಷೇತ್ರದಲ್ಲಿ ಉತ್ತರ ಕರ್ನಾಟಕವು ಹೆಚ್ಚು ಮುಂಚೂಣಿಯಲ್ಲಿತ್ತು. ಆ ಭಾಗದಲ್ಲಿ ಜನಿಸಿದ ಕನಕದಾಸರು ಉಡುಪಿ ಶ್ರೀ ಕೃಷ್ಣನ ದರ್ಶನ ಭಾಗ್ಯಕ್ಕಾಗಿ ನೂರಾರು ಕಿ.ಮೀ. ಭಜನೆಯೊಂದಿಗೆ ಕಾಲ್ನಡಿಗೆಯ ಲ್ಲಿ ಸಂಚರಿಸಿದ ವೇಳೆ ದೈವಶಕ್ತಿ ಕನಕರಲ್ಲಿ ತುಂಬಿದ ಬಳಿಕವೇ ಕೃಷ್ಣನ ವಿಗ್ರಹವು ಕನಕದಾಸರ ಕೀರ್ತನೆಗೆ ಮೆಚ್ಚಿ ದರ್ಶನ ಭಾಗ್ಯ ಲಭಿಸಿತು ಎಂದು ಹೇಳಿದರು.
ದಾಸ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷ ಹಿರೇನಲ್ಲೂರು ಶ್ರೀನಿವಾಸ್ ಮಾತನಾಡಿ, ಮಾನವನ ನೆಮ್ಮದಿ, ಸುಖಮಯ ಜೀವನ ಕ್ಕೆ ದಾಸ ಸಾಹಿತ್ಯವು ಪೂರಕ ಹಾಗೂ ಮನಸ್ಸನ್ನು ಹದಗೊಳಿಸುವ ಶಕ್ತಿಯಿದೆ. ಅನೇಕ ವಿದ್ವಾಂಸರ ಸಂಗೀತದಿAದ ಸಾಹಿತ್ಯದ ಬಗ್ಗೆ ಒಲವು ಹೊಂದಿ ಇದೀಗ ಜಿಲ್ಲಾ ಸಾರಥ್ಯ ವಹಿಸಿದ್ದು ಮುಂದೆ ಕನ್ನಡಾಂಭೆಯ ಸೇವೆಯಲ್ಲಿ ತೊಡಗುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಾಸ ಸಾಹಿತ್ಯ ರಾಜ್ಯ ಸಂಚಾಲಕ ಸೂರಿ ಶ್ರೀನಿವಾಸ್, ಜಿಲ್ಲೆಯ ಪ್ರತಿ ತಾಲೂಕಿನಾದ್ಯಂತ ಘಟಕವನ್ನು ಸ್ಥಾಪಿಸಿ ಜವಾಬ್ದಾರಿ ಕೊಡುವ ಮುಖಾಂತರ ಕನ್ನಡತಾಯಿ ಭುವನೇಶ್ವರಿಗೆ ಸಾಹಿತ್ಯದ ದಿವ್ಯಾಭರಣವನ್ನು ಅಲಂಕರಿಸುವ ಕಾಯಕ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ದಾಸ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷೆ ಮಹಾಲಕ್ಷಿö್ಮÃ ನಾಗರಾಜ್, ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ತಾಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಮಹಿಳಾ ಅಧ್ಯಕ್ಷೆ ವಿಜಯಲಕ್ಷಿö್ಮÃ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬೈರೇಗೌಡ ಮತ್ತಿತರರಿದ್ದರು.