

ಕಕ್ಕೇರಿ: ಮಹಾಭಾರತದಿಂದ ಭಾರತ ಸಂಸ್ಕಾರ, ಸಂಸ್ಕೃತಿ ಅರಿತುಕೊಂಡೆ ಎಂದು ಇಟಲಿ ದೇಶದ ಇಸ್ಕಾನ್‌ದ ರಾಸ ರಸಿಕ ಮಹಾರಾಜರು ಹೇಳಿದರು.
ಸಮೀಪದ ಕರಿಕಟ್ಟಿ ಗ್ರಾಮದ ವಿಠ್ಠಲ-ರುಕ್ಮಿಣಿ ಮಂದಿರದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ, ಕಳಸಾರೋಹಣ, ವಿಶ್ವ ಭಕ್ತಿ ಕಾರ್ಯಕ್ರಮ ಭವ್ಯವಾದ ವೇದಿಕೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ಯುವಪೀಳಿಗೆ ಮೊಬೈಲ್ ವ್ಯಸನ ಬಿಡಬೇಕು ಎಂದರು.
ಪಂಢರಪುರ ರೂಪಾ ಮೋಹನ ಮಹಾರಾಜ ಮಾತನಾಡಿ, ಯುವ ಪೀಳಿಗೆಗೆ ಸಂಸ್ಕಾರ, ಸಂಸ್ಕೃತಿ, ಪೂಜೆ, ಪುರಸ್ಕಾರ, ಭಜನೆ ಕಲಿಸಿಕೊಟ್ಟಲ್ಲಿ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು.
ಮಹಾರಾಷ್ಟ್ರದ ಗುರುವರ್ಯ ಬಾಳಗಿರಿ ಮಹಾರಾಜ ಮಾತನಾಡಿ, ಕೇವಲ ಮಂದಿರ ಪ್ರತಿಷ್ಠಾಪನೆ ಮಾಡಿದರೆ ಸಾಲದು. ನಿತ್ಯ ಪೂಜೆ-ಪುನಸ್ಕಾರ ಮಾಡಿದಲ್ಲಿ ಗ್ರಾಮವೇ ಪಾವನಗೊಳ್ಳುತ್ತದೆ ಎಂದರು.
ಶಾಸಕ ವಿಠ್ಠಲ ಹಲಗೇಕರ ಮಾತನಾಡಿ, ವಿಠ್ಠಲ-ರುಕ್ಮಿಣಿ ಮಂದಿರಕ್ಕೆ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿಗೊಳಿಸಲು ಸಹಾಯ ಮಾಡುತ್ತೇನೆ ಎಂದರು.
ಕಾಂಗ್ರೆಸ್ ಧುರೀಣ ಇರ್ಫಾನ್ ತಾಳಿಕೋಟಿ, ಪೋರ್ಚುಗಲ್ ಇಸ್ಕಾನಿನ ನಟರಾಜ ಮಹಾರಾಜರು, ಪಂಢರಪುರ ಸಂಜಯ ಪಾಟೀಲ ಮಹಾರಾಜ, ಪಾಂಡುರಂಗ ಮಹಾರಾಜರು, ವೃಂದಾವನ ಮಹಾರಾಜರು, ನ್ಯಾಯಾಧೀಶ ಬಿ.ಡಿ. ಕುಲಕರ್ಣಿ, ಡಾ. ದತ್ತಾತ್ರೇಯ ಡುಂಬ್ರೆ ಮಾತನಾಡಿದರು.
ಮಂದಿರದ ಅಧ್ಯಕ್ಷ ದೇಮಣ್ಣ ವಡ್ಡರ, ದೇವಪ್ಪ ಬೀದರಗಡ್ಡಿ , ಅರ್ಜುನ ವಡ್ಡರ, ಸಂಜೀವ ಚುರುಮರಿ, ಹನುಮಂತ ವಡ್ಡರ, ಬಸವರಾಜ್ಯ ವಡ್ಡರ, ರಾಮು ಆಮರಾಪುರ, ಮಹಾಂತೇಶ ಬಾಳೆಕುಂದ್ರಿ, ಸುಭಾಸ ತಳವಾರ, ಬಸವರಾಜ ಬೇಕ್ವಾಡಕರ, ಸುರೇಶ ತಳವಾರ, ವಸಂತ ತಿಪ್ಪಣ್ಣವರ, ಕಿಶೋರ ಮಿಠಾರಿ, ಮಂಜುನಾಥ ಪಾಟೀಲ ಇತರರಿದ್ದರು.