

ಚಿತ್ರದುರ್ಗ: ಕಾಂಗ್ರೆಸ್‌ಗಾಗಿ ವಿದ್ಯಾರ್ಥಿ ಸಂಘಟನೆ ಬಲಪಡಿಸಲು ದುಡಿಯುತ್ತಿರುವ ಯುವತಿಯರಿಗೂ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕು ಎಂದು ಎನ್‌ಎಸ್‌ಯುಐನ ರಕ್ಷಿತಾ ರಾಥೋಡ್ ರಾಜ್ಯಾಧ್ಯಕ್ಷರಿಗೆ ಒತ್ತಾಯಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿನಯ್ ಗೋಡೆಮನೆ ಅವರನ್ನೇ ಲೋಕಸಭಾ ಚುನಾವಣೆವರೆಗೂ ಚಿತ್ರದುರ್ಗ ಜಿಲ್ಲಾಧ್ಯಕ್ಷರಾಗಿ ಮುಂದುವರೆಸಿ, ಆನಂತರ ಯುವತಿಯರಿಗೆ ಅವಕಾಶ ಕಲ್ಪಿಸಲೇಬೇಕು. ನಾನೂ ಉಪಾಧ್ಯಕ್ಷೆಯಾಗಿ ದುಡಿದಿದ್ದೇನೆ. ನನ್ನಂತ ಅನೇಕರೂ ಶ್ರಮಿಸಿದ್ದು, ಸ್ತ್ರೀಗೆ ಪ್ರಾಧಾನ್ಯತೆ ನೀಡಬೇಕು ಎಂದು ಆಗ್ರಹಿಸಿದರು.
ಮಹಿಳೆಯರು ರಾಜಕೀಯ ಪ್ರವೇಶಿಸಬೇಕು ಎಂಬುದಾಗಿ ಭಾಷಣಕ್ಕೆ ಸೀಮಿತಗೊಳಿಸಿದರೆ, ಯಾವ ಪ್ರಯೋಜನವಿಲ್ಲ. ಸಮನಾಗಿ ಕಂಡು ಮೊದಲು ಬೆಳೆಸುವ ಪ್ರವೃತ್ತಿ ಮೈಗೂಡಿಸಿಕೊಳ್ಳದಿದ್ದರೆ, ಯಾರೂ ಆಸಕ್ತಿ ವಹಿಸುತ್ತಾರೆ ಎಂದು ಪ್ರಶ್ನಿಸಿದರು.