ಯುವತಿ ಆತ್ಮಹತ್ಯೆ

28Athani2
Published on

ಅಥಣಿ ಗ್ರಾಮೀಣ: ಮದುವೆಯಾಗು ತ್ತೇನೆಂದು ನಂಬಿಸಿ ಕೈಕೊಟ್ಟ ಹಿನ್ನೆಲೆಯಲ್ಲಿ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯ ತಾಂವಶಿ ಗ್ರಾಮದ ಯುವತಿಯೋರ್ವಳು ಮನನೊಂದು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ತೇಜಸ್ವಿನಿ ಗಂಗಪ್ಪ ಗುಜ್ಜರ (21) ಆತ್ಮಹತ್ಯೆ ಮಾಡಿಕೊಂಡ ಯುವತಿ. ಅಥಣಿ ಪಟ್ಟಣದ ಆಸೀಫ್ ದೇಸಾಯಿ ಪ್ರೀತಿಸಿ ಕೈಕೊಟ್ಟಿದ್ದಾನೆ. ಆರೋಪಿ ಆಸೀಫ್ ತೇಜಸ್ವಿನಿಯನ್ನು ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ. ಜ.26ರಂದು ಮದುವೆ ಆಗುವುದಿಲ್ಲ ಎಂದು ಆಶೀಫ್ ನಿರಾಕರಿಸಿದಾಗ ಮನನೊಂದ ತೇಜಸ್ವಿನಿ ಕೀಟನಾಶಕ ಸೇವಿಸಿದ್ದಳು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತಾದರೂ ಜ.27 ರಂದು ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾಳೆ. ಮೃತಳ ತಾಯಿ ಶೋಭಾ ಗುಜ್ಜರ ಅವರು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net