ಯುವಜನೋತ್ಸವದಲ್ಲಿ ಕೆ.ಎಸ್.ಪ್ರಗತಿ ಸಾಧನೆ

4 gkp 02
Published on

ಗೋಣಿಕೊಪ್ಪ: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಇಂಡಿಯನ್ ಯುವಕ ಸಂಘ ಮತ್ತು ನಿಸರ್ಗ ಯುವತಿ ಮಂಡಳಿ ವತಿಯಿಂದ ಶನಿವಾರ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವದ ಕೊಳಲು, ತಬಲ, ಭರತನಾಟ್ಯ, ಒಡ್ಡಿಸಿ, ಮಣಿಪುರಿ, ಕುಚುಪುಡಿ ಹಾಗೂ ಗಿಟಾರ್ ವಿಭಾಗಗಳಲ್ಲಿ ಕುಶಾಲಗನರದ ಕೆ.ಎಸ್.ಪ್ರಗತಿ ಪ್ರಥಮ ಸ್ಥಾನ ಪಡೆದಿದ್ದಾರೆ.


ಫಲಿತಾಂಶ: ಜನಪದ ನೃತ್ಯದಲ್ಲಿ ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ (ಪ್ರ), ಸೋಮವಾರಪೇಟೆ ಡಾ.ಅಂಬೇಡ್ಕರ್ ವಸತಿ ಶಾಲೆ (ದ್ವಿ), ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (ತೃ). ಜನಪದ ಗೀತೆಯಲ್ಲಿ ಸೋಮವಾರಪೇಟೆ ಗಂಧರ್ವ ಯುವಕ ಸಂಘ (ಪ್ರ), ನಿಸರ್ಗ ಯುವತಿ ಮಂಡಳಿ (ದ್ವಿ), ಪೊನ್ನಂಪೇಟೆಯ ದಿಕ್ಸಿತಾ ತಂಡ (ತೃ). ಏಕಾಂಗ ನಾಟಕದಲ್ಲಿ ಲಕ್ಷ್ಮೀ (ಪ್ರ), ಮುರಾರ್ಜಿ ಶಾಲೆ (ದ್ವಿ), ಕುಶಾಲನಗರದ ಪ್ರಗತಿ (ತೃ). ಶಾಸ್ತ್ರೀಯ ಗಾಯನದಲ್ಲಿ ಸೌಮ್ಯಾ ನಾಗೇಶ್ (ಪ್ರ), ವಿ. ಧನುಶ್ರೀ (ದ್ವಿ), ಪಂಚಮಿ ನಾಗರಾಜ್ (ತೃ) ಸ್ಥಾನ ಪಡೆದಿದ್ದಾರೆ. ಪ್ರಥಮ ಸ್ಥಾನ ಪಡೆದ ತಂಡಗಳು ಡಿ.16ರಿಂದ ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಪ್ರವೇಶ ಪಡೆದಿವೆ.


ಜಿಲ್ಲಾ ಯುವ ಒಕ್ಕೂಟ ದ ಅಧ್ಯಕ್ಷ ಪಿ.ಪಿ.ಸುಕುಮಾರ, ಶಾಲೆಯ ಉಪ ಪ್ರಾಂಶುಪಾಲ ಚಂಗಪ್ಪ, ಪೊನ್ನಂಪೇಟೆ ಪಿಡಿಒ ಪುಟ್ಟರಾಜು, ಸದಸ್ಯ ಮೂಕಳೇರ ಮಧುಕುಮಾರ್, ನಿಸರ್ಗ ಯುವತಿ ಮಂಡಳಿ ಅಧ್ಯಕ್ಷೆ ರೇಖಾ ಶ್ರೀಧರ್, ಯುವ ಒಕ್ಕೂಟದ ತಾಲೂಕು ಅಧ್ಯಕ್ಷೆ ಶೀಲಾ ಬೋಪಣ್ಣ, ಕೋಟೇರ ಕಿಶನ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net