ಯುವಜನೋತ್ಸವದಲ್ಲಿ ಉತ್ತಮ ಸಾಧನೆ

9Jaggu3
ಹುಬ್ಬಳ್ಳಿ ವಲಯ ಮಟ್ಟದ ಯುವಜನೋತ್ಸವದಲ್ಲಿ ಉತ್ತಮ ಸಾಧನೆ ಮಾಡಿದ ರಾಜಾ ಲಖಮಗೌಡ ಕಾನೂನು ಕಾಲೇಜು ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು.
Published on

ಬೆಳಗಾವಿ: ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಕಾಲೇಜು ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಮತ್ತು ಜಮಖಂಡಿಯ ಬಿಎಲ್ಇಡಿ ಕಾನೂನು ಕಾಲೇಜು ಜಂಟಿಯಾಗಿ ಆಯೋಜಿಸಿದ್ದ ಹುಬ್ಬಳ್ಳಿ ವಲಯ ಮಟ್ಟದ ಯುವಜನೋತ್ಸವದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಲಘು ಗಾಯನದ ಏಕವ್ಯಕ್ತಿ ಗಾಯನದಲ್ಲಿ ನಿದಾ ಬಿಜಾಪುರ ಪ್ರಥಮ, ಪವನ ಶಿರೋಳ ಮತ್ತು ಮನೋಜ ಪಾಟೀಲ ಚರ್ಚಾ ಸ್ಪರ್ಧೆಯಲ್ಲಿ ದ್ವಿತೀಯ, ಶ್ರದ್ಧಾ ಔರಾದಕರ ಸ್ಪಾಟ್ ಪೇಂಟಿಂಗ್‌ನಲ್ಲಿ ದ್ವಿತೀಯ ಬಹುಮಾನ ಪಡೆದರು. ಸ್ಕಿಟ್ ಸ್ಪರ್ಧೆಯಲ್ಲಿ ದೇವೇಂದ್ರ, ಆಕಾಶ್, ಓಂಕಾರ, ಜಯಶ್ರೀ, ಕಾವ್ಯ ಮತ್ತು ದೀಪಾ ದ್ವಿತೀಯ ಬಹುಮಾನ ಪಡೆದರು.

ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಎಂ.ಆರ್. ಕುಲಕರ್ಣಿ, ಪ್ರಾಚಾರ್ಯ ಡಾ.ಎ.ಎಚ್. ಹವಾಲ್ದಾರ, ಚರ್ಚಾ ಒಕ್ಕೂಟದ ಸಮನ್ವಯಾಧಿಕಾರಿ ಎಂ.ಎಸ್. ಕುಲಕರ್ಣಿ, ಸಾಂಸ್ಕೃತಿಕ ವಿಭಾಗದ ಸಮನ್ವಯಾಧಿಕಾರಿ ಶಿಲ್ಪಾ ರಾಯ್ಕರ್ ಅವರು ವಿದ್ಯಾರ್ಥಿಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net