

ರಾಯಬಾಗ: ಯುವಜನಾಂಗ ದೇಶಾಭಿಮಾನ ಬೆಳೆಸಿಕೊಂಡು, ರಾಷ್ಟ್ರಸೇವೆಗೆ ಬದ್ಧವಾಗಬೇಕು ಎಂದು ಶಾಸಕ ಡಿ.ಎಂ. ಐಹೊಳೆ ಕರೆ ನೀಡಿದರು.
ಪಟ್ಟಣದ ಮಹಾವೀರ ಭವನದಲ್ಲಿ ತಾಲೂಕಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾತಂತ್ರ‍್ಯ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉಪನ್ಯಾಸಕ ಸಂತೋಷ ಮಾನೆ ಉಪನ್ಯಾಸ ನೀಡಿದರು. ಕ್ರೀಡೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಅಂಗವಿಕಲ ಮಕ್ಕಳಿಗೆ ಪರಿಕರ ವಿತರಿಸಲಾಯಿತು.
ತಹಸೀಲ್ದಾರ್ ಸುರೇಶ ಮುಂಜೆ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಶೋಕ ಅಂಗಡಿ, ತಾಪಂ ಇಒ ಡಾ.ಸುರೇಶ ಕದ್ದು, ಸಿಪಿಐ ಬಿ.ಎಸ್. ಮಂಟೂರ, ವಿ.ಎಸ್. ಚಂದರಗಿ, ವಿನೋದ ಮಾವರಕರ, ವಿ.ಆರ್. ಭಜಂತ್ರಿ, ಕುಮಾರ ಮಾದರ, ಪರಮಾನಂದ ಮಂಗಸೂಳಿ, ಸುಭಾಷ ಭಜಂತ್ರಿ, ಆರ್.ಬಿ. ಮನವಡ್ಡರ, ಕಲ್ಪನಾ ಕಾಂಬಳೆ, ಡಾ.ಎಂ.ಬಿ. ಪಾಟೀಲ, ಎಚ್.ಎಲ್. ಪ್ರಜಾರಿ, ಬಸವರಾಜ ಕಾಂಬಳೆ, ಸದಾಶಿವ ಘೋರ್ಪಡೆ, ಸುರೇಶ ಮಾಳಿ, ಸದಾನಂದ ಹಳಿಂಗಳಿ, ಅನಿಲ ಶೆಟ್ಟಿ, ಇರ್ಫಾನ್ ತಾಂಬೋಳಿ, ಅನಿಲ ಕೊರವಿ, ಭಾರತಿ ಲೋಹಾರ ಸೇರಿ ಇತರಿದ್ದರು.