ಯುವಜನರೇ ದೇಶದ ನಿಜಸಂಪತ್ತು

8 ckm 3
ಚಿಕ್ಕಮಗಳೂರಿನ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ರೋಟರಿ ಕ್ಲಬ್‌ನಿಂದ ಆಯೋಜಿಸಿದ್ದ ಪ್ರತಿಭೆಯ ಸಂಭ್ರಮ ಯುವಚೇತನ ೨೦೨೪-೨೫ ಕಾರ್ಯಕ್ರಮವನ್ನು ರೋಟರಿ ೩೧೮೨ ಜಿಲ್ಲಾ ರಾಜ್ಯಪಾಲ ಉಡುಪಿಯ ಸಿ.ಎ.ದೇವಾನಂದ ಉದ್ಘಾಟಿಸಿದರು. ಎಚ್.ಸಿ.ರವೀಶ್, ಎಂ.ಎಲ್.ಸುಜಿತ್, ಕೆ.ಎಸ್.ಆದರ್ಶ, ನಾಸಿರ್ ಹುಸೇನ್ ಮತ್ತಿತರರಿದ್ದರು.
Published on

ಚಿಕ್ಕಮಗಳೂರು: ಯುವ ಜನರೆ ದೇಶದ ನಿಜವಾದ ಸಂಪತ್ತು. ಅವರಿಗೆ ಪ್ರಾಮುಖ್ಯತೆ ಕೊಟ್ಟರೆ ಸಾಮರ್ಥ್ಯ ಉಪಯುಕ್ತವಾಗುತ್ತದೆ ಎಂದು ರೋಟರಿ ೩೧೮೨ ಜಿಲ್ಲಾ ರಾಜ್ಯಪಾಲ ಉಡುಪಿಯ ಸಿ.ಎ.ದೇವಾನಂದ ತಿಳಿಸಿದರು.

ನಗರದ ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ರೋಟರಿ ಕ್ಲಬ್‌ನಿಂದ ಆಯೋಜಿಸಿದ್ದ ಪ್ರತಿಭೆಯ ಸಂಭ್ರಮ ಯುವಚೇತನ ೨೦೨೪-೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಿಕ್ಕಮಗಳೂರು ರೋಟರಿಕ್ಲಬ್ ಕಳೆದ ೩೦ವರ್ಷಗಳಿಂದ ಯುವ ಸಪ್ತಾಹವನ್ನು ಆಯೋಜಿಸುವ ಮೂಲಕ ಪ್ರತಿಭಾವಂತರಿಗೆ ವೇದಿಕೆ ಕಲ್ಪಿಸುತ್ತಿದೆ. ಪ್ರತಿ ಯುವಕರಲ್ಲೂ ಒಂದಿಲ್ಲೊAದು ಪ್ರತಿಭೆ ಇರುತ್ತದೆ. ನಿಜಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿ ಬೆಂಬಲಿಸಿದರೆ ಅದರಿಂದ ಸಮಾಜಕ್ಕೆ ಉಪಯೋಗವಾಗುತ್ತದೆ ಎಂದರು.

ಸ್ವಾಮಿವಿವೇಕಾನAದರಿಗೆ ಯುವಶಕ್ತಿಯ ಮೇಲೆ ಅಪಾರ ವಿಶ್ವಾಸವಿತ್ತು. ಯುವಕರಲ್ಲಿರುವ ಸಂಪನ್ಮೂಲ ಸಮರ್ಪಕ ಬಳಕೆಯಾಗಬೇಕೆಂದು ಬಯಸಿದ್ದರು. ತರುಣರಲ್ಲಿ ಉತ್ತಮವಾದ ದೊಡ್ಡ ಗುರಿಯನ್ನು ಕಣ್ಮುಂದೆ ಇರಿಸಿಕೊಳ್ಳುವಂತಹ ವಾತಾವರಣ ಸೃಷ್ಟಿಯಾಗಬೇಕು. ಅವರಿಗೆ ಸರಿಯಾದ ತರಬೇತಿ, ಮಾರ್ಗದರ್ಶನ, ಆಪ್ತಸಲಹೆ-ಸೂಚನೆಗಳು ಸಕಾಲದಲ್ಲಿ ಸಿಗುವಂತಾದರೆ ಅದರಿಂದ ದೇಶಕ್ಕೆ ಒಳಿತಿದೆ ಎಂಬುದು ವಿವೇಕರ ಆಶಯವಾಗಿತ್ತು ಎಂದರು.

ಅವಿರತವಾದ ಪರಿಶ್ರಮದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಗುರಿಯತ್ತ ಸಾಗಲು ಸಿದ್ಧತೆಯೂ ಮುಖ್ಯ. ನಮ್ಮಲ್ಲಿರುವ ಶಕ್ತಿ ಮತ್ತು ದೌರ್ಬಲ್ಯಗಳನ್ನು ಅರ್ಥಮಾಡಿಕೊಳ್ಳಬೇಕು. ಶಿಕ್ಷಕರು, ಕುಟುಂಬದ ಹಿರಿಯರು, ಸೇವಾಸಂಸ್ಥೆಗಳನ್ನು ಬಳಕೆ ಮಾಡಿಕೊಳ್ಳುವುದು ಒಳಿತು ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ವಿಫುಲ ಅವಕಾಶಗಳಿವೆ. ಅಕ್ಟೋಬರ್‌ನಿಂದ ನವೆಂಬರ್‌ವರೆಗೆ ಪಠ್ಯೇತರ ಚಟುವಟಿಕೆಗಳಿಗೆ ಶಾಲೆಗಳಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಪ್ರತಿಭಾಕಾರಂಜಿ, ಕ್ರೀಡಾಕೂಟ, ಶೈಕ್ಷಣಿಕ ಪ್ರವಾಸ, ವಾರ್ಷಿಕೋತ್ಸವಗಳು ಈ ಎರಡು ತಿಂಗಳುಗಳಲ್ಲಿ ನಡೆಯಬೇಕೆಂಬುದು ಇಲಾಖೆಯ ಅಪೇಕ್ಷೆ. ಜನವರಿ ನಂತರ ಸಂಪೂರ್ಣ ಶೈಕ್ಷಣಿಕ ವಿಷಯಗಳಿಗೆ ನೆರವಾದ ಪ್ರಯತ್ನಗಳು ನಡೆಯುತ್ತವೆ. ಐದು ದಿನಗಳಲ್ಲಿ ಎಂಟು ವಿಧದ ಸ್ಪರ್ಧೆಗಳನ್ನೊಳಗೊಂಡ ಪ್ರತಿಭಾ ಸಪ್ತಾಹ ನಡೆಸುವ ಮೂಲಕ ರೋಟರಿ ಸಂಸ್ಥೆ ಉತ್ತಮ ವೇದಿಕೆ ಕಲ್ಪಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು ರೋಟರಿಕ್ಲಬ್ ಅಧ್ಯಕ್ಷ ಎಂ.ಎಲ್.ಸುಜಿತ್ ಮಾತನಾಡಿ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೈವಿಧ್ಯಮಯವಾದ ಸ್ಪರ್ಧೆಗಳನ್ನು ಸಪ್ತಾಹದ ಅವಧಿಯಲ್ಲಿ ಆಯೋಜಿಸಲಾಗಿದೆ. ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದ್ದು ಹರ್ಷ ತಂದಿದೆ. ಪ್ರತಿವರ್ಷ ಜನವರಿ ತಿಂಗಳಿನಲ್ಲಿ ಸಪ್ತಾಹ ಆಚರಿಸುತ್ತಿದ್ದು ಪರೀಕ್ಷೆಗಳು ಸಮೀಪಿಸುವುದರಿಂದ ವಿದ್ಯಾರ್ಥಿಗಳಿಗೆ ಭಾಗವಹಿಸಲು ಕಷ್ಟವಾಗುತ್ತದೆ ಎಂಬ ಕಾರಣದಿಂದ ಇಲಾಖೆಯ ಸಲಹೆ ಮೇರೆಗೆ ನವೆಂಬರ್‌ನಲ್ಲಿ ನಡೆಸಲಾಗುತ್ತಿದೆ ಎಂದರು.

ರೋಟರಿ ಖಜಾಂಚಿ ಕೆ.ಎಸ್.ಆದರ್ಶ್, ಸಹಾಯಕ ರಾಜ್ಯಪಾಲ ನಾಸಿರ್‌ಹುಸೇನ್, ಇನ್ನರ್‌ವ್ಹೀಲ್ ಅಧ್ಯಕ್ಷೆ ಶಾಲಿನಿ, ಜೀವನಸಂಧ್ಯಾ ಟ್ರಸ್ಟ್ ಅಧ್ಯಕ್ಷ ಶ್ರೀಕಾಂತಶೆಟ್ಟಿ, ಮಾಜಿಅಧ್ಯಕ್ಷರಾದ ಅನಂತೇಗೌಡ, ಡಿ.ಎಚ್.ನಟರಾಜ್, ಎಂ.ಆರ್.ಕಿರಣ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net