ಯುವಜನರು ಸಂಪ್ರದಾಯ ಪಾಲಿಸಲಿ

Published on

ಬೆಲಹೊಂಗಲ: ಧಾರ್ಮಿಕ ಆಚರಣೆಗಳಿಂದ ಸಮಾಜದಲ್ಲಿ ಉತ್ತಮ ಸಂಸ್ಕ್ರತಿ& ಸಂಸ್ಕಾರ ಬೆಳೆಯಲಿದೆ ಎಂದು ಯಕ್ಕಂಡಿ&ಕಾರ್ಲಕಟ್ಟಿ ಸಿದ್ದಾರೂಢ ಮಠದ ಮುಖ್ಯಸ್ಥ ಸಚ್ಚಿದಾನಂದ ಭಾರತಿ ಸ್ವಾಮೀಜಿ ಹೇಳಿದರು.

ತಾಲೂಕಿನ ಯರಡಾಲ ಗ್ರಾಮದ ಕೆಳದಿ ರಾಜಗುರು ಸಂಸ್ಥಾನ ಶಾಖಾ ಹಿರೇಮಠದ ಆಶ್ರಯದಲ್ಲಿ ಶ್ರೀದೇವಿ ಪುರಾಣ ಮುಕ್ತಾಯ ಸಮಾರಂಭ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಹಳ್ಳಿಗಳು ರಾಷ್ಟ್ರದ ಜೀವಾಳವಾಗಿದ್ದು, ಯವಜನರು ಸಂಪ್ರದಾಯಗಳನ್ನು ಮುಂದುವರಿಸಿಕೊಂಡು ಸಾಗಬೇಕು ಎಂದರು.

ಸಾಧಕ ರೆತರಿಗೆ ಉತ್ತಮ ಕಷಿಕ ಪ್ರಶಸ್ತಿ ನೀಡಲಾಯಿತು. ಅಂಗವಿಕಲ ಕ್ರೀಡಾಪಟು ಕವಿತಾ ಮಡಿವಾಳರ ಸ್ವಿಮ್ಮಿಂಗ್​ನಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಪ್ರಯುಕ್ತ ಸತ್ಕರಿಸಲಾಯಿತು. ಮುತೆದೆಯರಿಂದ ಕುಂಭಮೇಳ, ದುರ್ಗಾ ಪರಮೇಶ್ವರಿಯ ಭವ್ಯ ಮೆರವಣಿಗೆ, ಬನ್ನಿ ಮುಡಿಯುವ ಹಾಗೂ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು. ಅನ್ನ ಪ್ರಸಾದ ಏರ್ಪಡಿಸಲಾಗಿತ್ತು. ಬೆಲಹೊಂಗಲದ ಎಪಿಎಂಸಿ ಮಾಜಿ ಅಧ್ಯ ಸಿ.ಆರ್​. ಪಾಟೀಲ, ಗ್ರಾಪಂ ಸದಸ್ಯ ಶ್ರೀಶೆಲಗೌಡ ಪಾಟೀಲ, ಹಿರಿಯರಾದ ಮಲ್ಲಪ್ಪ ರಾಜಗೋಳಿ, ಶಂಕರ ಮುರಗೋಡ, ಶೇಖಪ್ಪ ಪೂಜೇರ, ಬಸವರಾಜ ಹುದ್ದಾರ, ರಾಮನಿಂಗ ಮುದಿನಾಯ್ಕರ, ಬಸಪ್ಪ ಹೂಗಾರ, ತಿಪ್ಪಣ್ಣ ಸಂಗೊಳ್ಳಿ, ನಾಗಪ್ಪ ದೇವಲಾಪುರ, ಕಲ್ಲಮ್ಮ ಗೌರಿ, ಚಿನ್ನವ್ವ ರಾಜಗೋಳಿ, ಮಹಾದೇವಿ ಪಾಟೀಲ, ಸುಗಂಧಾ ಬಡಿಗೇರ, ಉಪನ್ಯಾಸಕಿ ರೂಪಾ ಬನಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net