ಯುವಜನರು ಬುದ್ಧನ ತತ್ವಾದರ್ಶ ಪಾಲಿಸಿ

HUN-JAN-12-2(D D URS COLLEGE PROGRAMME)
ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಬೌದ್ಧ ಸಮಯದಾಯಗಳ ಸಂಸ್ಥೆ ವತಿಯಿಂದ ಗಣ್ಯರನ್ನು ಸನ್ಮಾನಿಸಲಾಯಿತು. ಡಾ.ಎಸ್.ಶ್ರೀಕಾಂತ್, ಡಾ.ವೆಂಕಟೇಶಯ್ಯ, ಪುಟ್ಟರಾಜು, ಸಂತೋಷ್‌ಕುಮಾರ್ ಇದ್ದಾರೆ.
Published on

ಹುಣಸೂರು: ಶಾಂತಿ, ಸಾಮರಸ್ಯದ ನೀತಿಯನ್ನು ವಿಶ್ವಕ್ಕೆ ಸಾರಿದ ಬುದ್ಧನ ತತ್ವಾದರ್ಶಗಳನ್ನು ಯುವ ಜನರು ಪಾಲಿಸಬೇಕು ಎಂದು ಡೀಡ್ ಸಂಸ್ಥೆಯ ಮುಖ್ಯಸ್ಥ ಡಾ.ಎಸ್.ಶ್ರೀಕಾಂತ್ ಸಲಹೆ ನೀಡಿದರು.

ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಂಚಶೀಲ ಬೌದ್ಧ ಧ್ವಜ ಸ್ಥಾಪನಾ ದಿನದ ಅಂಗವಾಗಿ ಭಾರತೀಯ ಬೌದ್ಧ ಸಮುದಾಯ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಬುದ್ಧನ ವಿಚಾರಧಾರೆಗಳನ್ನು ಒಳಗೊಂಡ ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಶ್ರೀಲಂಕಾ ದೇಶ ಬುದ್ಧ ಮತ್ತು ಅರಳೀಮರ ಎರಡನ್ನೂ ಜತೆಯಾಗಿ ಇಟ್ಟುಕೊಂಡು ತಾರತಮ್ಯವಿಲ್ಲದ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ ಬುದ್ಧನ ತವರೂರಾದ ಭಾರತದಲ್ಲಿ ಆಲದಮರ ಮಾತ್ರ ಇದ್ದು ಬುದ್ಧ ತತ್ವಾದರ್ಶಗಳು ಕಾಣೆಯಾಗಿವೆ. ಇಂದಿನ ಗೊಂದಲದ, ಕ್ಷೋಭೆಯ ವಾತಾವರಣ ತಿಳಿಯಾಗಲು ಬುದ್ಧತತ್ವದ ಅನುಸರಣೆಯಲ್ಲದೇ ಮತ್ತ್ಯಾವ ಪರಿಹಾರವೂ ಇಲ್ಲ. ಮುಖ್ಯವಾಗಿ ಯುವಸಮೂಹ ಬುದ್ಧನ ತತ್ವಾದರ್ಶಗಳನ್ನು ಅರಿತು ಮುನ್ನಡೆಯಲು ಇದು ಸರಿಯಾದ ಸಮಯ ಎಂದು ತಿಳಿಸಿದರು.

ಪ್ರಾಂಶುಪಾಲ ಪ್ರೊ.ವೆಂಕಟೇಶಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮೌಲ್ವಿಕ ಶಿಕ್ಷಣ ಮತ್ತು ಪರಂಪರೆಯ ಸಾಂಸ್ಕೃತಿಕ ಹಿನ್ನೆಲೆ ತಿಳಿದು ಒಳ್ಳೆಯ ಪ್ರಜೆಯಾಗಿ ಅರಳಲು ಬುದ್ಧನ ಜೀವನಾದರ್ಶ ದಾರಿದೀಪವಾಗಲಿದೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಕೆ.ಸಂತೋಷ್‌ಕುಮಾರ್, ವಕೀಲ ಪುಟ್ಟರಾಜು ಮಾತನಾಡಿದರು. ಗಾಯಕರಾದ ಟಿ.ಎ.ಹನುಮಯ್ಯ, ಸಿಂಗೇಶ್ ಮತ್ತು ಅರ್ಚನಾ ಬುದ್ಧ ಗೀತೆಗಳನ್ನು ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net