

ಕೊಳವಿ: ಧರ್ಮ ಸಭೆಗಳನ್ನು ಹಮ್ಮಿಕೊಂಡು ಸಂತರು ಹಾಗೂ ಶರಣರ ಮೂಲಕ ಯುವಜನರಲ್ಲಿ ಆಚಾರ&ವಿಚಾರ, ನಡೆನುಡಿ ಹಾಗೂ ನಮ್ಮ ಸಂಸತಿ ಪರಿಚಯಿಸಬೇಕಿದೆ ಎಂದು ಸೋಮನಟ್ಟಿ ಸಿದ್ದಲಿಂಗಯ್ಯ ಶಾಸ್ತ್ರಿಗಳು ಹೇಳಿದರು.
ಸಮೀಪದ ಹೂಲಿಕಟ್ಟಿ ಗ್ರಾಮದ ಶಿವಲಿಂಗೇಶ್ವರ 22ನೇ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಆಯೋಜಿಸಿರುವ ಪ್ರವಚನ ಹಾಗೂ ಧರ್ಮಸಭೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಶಿಣದ ಕೊಡಲು ಪೋಷಕರು ಮುಂದಾಗಬೇಕು. ಭಾರತಮಾತೆ ಪುತ್ರ ಸ್ವಾಮಿ ವಿವೇಕಾನಂದರು ವಿಶ್ವಕ್ಕೆ ಹಿಂದೂ ಸಂಸ್ಕತಿಯ ಮಹತ್ವ ತಿಳಿಸಿಕೊಟ್ಟಿದ್ದಾರೆ ಎಂದರು.
ಅರ್ಚಕ ಪತ್ರಯ್ಯ ಹುಲಕಂತಿ ಸ್ವಾಮಿ ಯುವ ದಿನದ ನಿಮಿತ್ತ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಹೂಲಿಕಟ್ಟಿ ಶಿವಲಿಂಗೇಶ್ವರ ಮಠದ ಕುಮಾರ ದೇವರು ಸಾನ್ನಿಧ್ಯ ವಹಿಸಿದ್ದರು., ಬಟಕುರ್ಕಿ ಗದಗಯ್ಯ ದೇವರು, ಆದೋನಿ ಗುರುಸಿದ್ಧ ದೇವರು, ಬಾಗೋಜಿಕೊಪ್ಪ ಗುರುಪಾದ ಸ್ವಾಮೀಜಿ, ಕಲ್ಲಪ್ಪ ಬೂಮ್ಮನ್ನವರ, ಭರಮಪ್ಪ ಜಗಮಯ್ಯನವರ, ಲಕ್ಷ$್ಮಣ ಜಕ್ಕಪ್ಪಗೋಳ, ಮಲ್ಲಿಕಾರ್ಜುನ ಗೋಣಿ, ಶಿವಪುತ್ರ ಇಮ್ಮಡಿ, ಕಿರಣ ಗೋಣಿ, ಮಡ್ಯಪ್ಪ ಶಿಂಗಾಡಿ ಇತರರು ಇದ್ದರು.