ಯುವಜನತೆಗೆ ಸಂಹವನ ಕಲೆ ದೊಡ್ಡ ಆಸ್ತಿ

26-08-Shiva-3
ರಾಯಚೂರಿನ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಸಂಹವನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮವನ್ನು ರಾಯಚೂರು ವಿವಿ ಪ್ರಾಧ್ಯಾಪಕ ಅನಿಲ್ ಅಪ್ರಾಳ ಉದ್ಘಾಟಿಸಿದರು. ತಾರಾನಾಥ ಶಿಕ್ಷಣ ಸಂಸ್ಥೆ ಆಡಳಿತಾಕಾರಿ ಬಿ.ದೇವರೆಡ್ಡಿ, ಪ್ರಾಚಾರ್ಯ ಎಸ್.ಅಮರೇಗೌಡ, ಪ್ರಾಧ್ಯಾಪಕರಾದ ಸಂಜಯ್ ಪವಾರ್, ಸಣ್ಣ ವೀರನಗೌಡ ಇದ್ದರು.
Published on

ರಾಯಚೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವಜನರಿಗೆ ಸಂವಹನ ಕಲೆ ದೊಡ್ಡ ಆಸ್ತಿಯಾಗಿದ್ದು, ಶಿಕ್ಷಣದ ಜತೆಗೆ ಸಂವಹನ ಕೌಶಲ್ಯ ಹೊಂದಿದ್ದರೆ ಮಾತ್ರ ಜೀವನದಲ್ಲಿ ಸಾಧನೆಗೈಯಲು ಸಾಧ್ಯವಾಗಲಿದೆ ಎಂದು ತಾರಾನಾಥ ಶಿಕ್ಷಣ ಸಂಸ್ಥೆ ಆಡಳಿತಾಕಾರಿ ಬಿ.ದೇವರೆಡ್ಡಿ ಹೇಳಿದರು.
ಸ್ಥಳೀಯ ಎಸ್‌ಎಸ್‌ಆರ್‌ಜಿ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಂವಹನ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿದ್ಯಾರ್ಥಿಗಳು ಯಾವ ವಿಷಯವನ್ನು ಚೆನ್ನಾಗಿ ಅರಿತುಕೊಳ್ಳಬೇಕು, ವ್ಯವಹಾರ ಜ್ಞಾನ ತಿಳಿಸಯಲು ಸಂವಹನ ಕೌಶಲ್ಯವನ್ನು ರೂಪಿಸಿಕೊಳ್ಳಬೇಕು ಎಂದರು.
ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರಿಗೆ ನಿರಂತರವಾಗಿ ಪ್ರಶ್ನೆ ಕೇಳುವ ಮೂಲಕ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕು. ಉದ್ಯೋಗ ನೀಡುವಾಗಲು ಪದವಿಗಿಂತ ಸಂವಹನ ಜ್ಞಾನವನ್ನು ಪರೀಕ್ಷೆ ಮಾಡಲಾಗುತ್ತದೆ ಎಂದು ಹೇಳಿದರು.
ರಾಯಚೂರು ವಿವಿ ಪ್ರಾಧ್ಯಾಪಕ ಅನಿಲ ಅಪ್ರಾಳ್ ಮಾತನಾಡಿ, ಭಾಷೆಯ ಮೂಲಕ ತನ್ನ ಭಾವನೆಗಳನ್ನು ಹೊರಹಾಕುವಂತಹ ಸಾಧನಗಳನ್ನು ಸಂವಹನ ಕೌಶಲ್ಯವಾಗಿದೆ. ಯಾವುದೇ ಭಾಷೆಯಲ್ಲಾದರೂ ಸಂವಹನದಿಂದ ಜ್ಞಾನ ವೃದ್ಧಿಯಾಗುತ್ತಿದೆ. ಪಠ್ಯ ವಿಷಯಗಳ ಜತೆಗೆ ಸಾಮಾಜಿಕ ಜ್ಞಾನವನ್ನು ವಿದ್ಯಾರ್ಥಿಗಳು ಹೊಂದಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಎಸ್.ಅಮರೇಗೌಡ ಮಾತನಾಡಿ, ಹಿಂದೆ ಹೊಲ, ಮನೆ, ಆಸ್ತಿ ಇದ್ದರೆ ಮಾತ್ರ ಬದುಕಬಹುದು ಎನ್ನುವ ಮನಸ್ಥಿತಿ ಜನರಲ್ಲಿತ್ತು. ಆದರೆ ಕಾಲ ಬದಲಾದಂತೆ ಆಸ್ತಿಪಾಸ್ತಿಗಿಂತ ಆಧುನಿಕ ಕಾಲದಲ್ಲಿ ಸಂವಹನ ಕೌಶಲ್ಯವೇ ದೊಡ್ಡ ಆಸ್ತಿಯಾಗಿ ಪರಿಗಣಿಸಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜು ಪ್ರಾಧ್ಯಾಪಕರಾದ ಸಂಜಯ್ ಪವಾರ್, ಸಣ್ಣ ವೀರನಗೌಡ, ಡಾ.ಹನುಮಂತ ನಾಯಕ, ಡಾ.ರಾಜೇಶ್ವರಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net